ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ನಿವಾಸಿಗಳಿಗೆ ನಟ ಅನಿರುದ್ಧ್ ಪ್ರಶ್ನೆ
ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಖ್ಯಾತ ನಟ ಅನಿರುದ್ಧ್ ಜತ್ಕರ್ ಅವರು ಪಹಲ್ಗಾಮ್ ಹತ್ಯಾಕಾಂಡದ ಬಗ್ಗೆ ಮಾತನಾಡಿದ್ದಾರೆ. ಉಗ್ರರ ದಾಳಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ‘ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು, ಭಿನ್ನಮತದಿಂದಲೂ, ಹಿಂಸೆಯಿಂದಲೂ ಬೇರ್ಪಡಿಸಿಕೊಳ್ಳಬಾರದು’ ಎಂದು ಅನಿರುದ್ಧ್ ಜತ್ಕರ್ ಅವರು ಹೇಳಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ (Pahalgam Terror Attack) ಬಗ್ಗೆ ಕನ್ನಡದ ನಟ ಅನಿರುದ್ಧ್ ಜತ್ಕರ್ ಅವರು ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ಇತ್ತೀಚಿನ ಉಗ್ರರ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ವಸುಧೈವ ಕುಟುಂಬಕಂ, ಅಂದರೆ ಜಗತ್ತು ಒಂದು ಕುಟುಂಬ. ಈ ಸತ್ಯವನ್ನು ಇನ್ನೂ ಕೆಲವರು ಅರ್ಥ ಮಾಡಿಕೊಳ್ಳದಿರುವುದು ದುಃಖಕರವಾಗಿದೆ. ನಿಜವಾದ ಧೈರ್ಯ ಅವರಲ್ಲಿ ಇದ್ದರೆ, ನಿರಪರಾಧ, ನಿಷ್ಶಸ್ತ್ರ ನಾಗರಿಕರ ಹತ್ಯೆ ಮಾಡುವ ಬದಲು ಅವರು ಸಮರಭೂಮಿಗೆ ಬರಲಿ. ಭಾರತ ಸರ್ಕಾರ ಶೀಘ್ರದಲ್ಲೇ ಈ ದಾಳಿಕೋರರನ್ನು ಬಂಧಿಸಿ, ಅವರಿಗೂ ಅವರ ಆಲೋಚನೆಗೂ ಪಾಠ ಕಲಿಸಲಿ. ಕಾಶ್ಮೀರದ ಬಂಧುಗಳಲ್ಲಿ ನಾನು ಕೆಲವು ಪ್ರಶ್ನೆ ಕೇಳುತ್ತೇನೆ. ಅತ್ಯಂತ ಸುಂದರವಾದ ಕಾಶ್ಮೀರಕ್ಕೆ ಉಗ್ರರು ಹೇಗೆ ಪ್ರವೇಶ ಮಾಡಿದರು? ಅವರಿಗೆ ಯಾರ ಬೆಂಬಲ ಇದೆ? ಈಗ 1 ಲಕ್ಷಕ್ಕೂ ಅಧಿಕ ಜನರು ಕಾಶ್ಮೀರದ ಪ್ರವಾಸ ರದ್ದು ಮಾಡಿದ್ದಾರೆ. ಇದರಿಂದ ಯಾರಿಗೆ ನಷ್ಟ? ದಯವಿಟ್ಟು ಅರ್ಥ ಮಾಡಿಕೊಳ್ಳಿ’ ಎಂದು ಅನಿರುದ್ಧ್ (Anirudh Jatkar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.