ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ ಬಸನಗೌಡ ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ತನ್ನ ಜನಪ್ರಿಯತೆ ಗ್ರಾಫ್ ಏರುಮುಖದಲ್ಲಿ ಸಾಗಿದೆ ಎಂದು ಹೇಳುವ ಯತ್ನಾಳ್ ಜನಪ್ರಿಯತೆಯಲ್ಲಿ ತಾನು ಯಾರಿಗೂ ಕಡಿಮೆ ಇಲ್ಲ ಎಂದು ಹೇಳುವ ಪ್ರಯತ್ನ ಮಾಡುತ್ತಾರೆ. ಬಿಜೆಪಿಗೆ ವಾಪಸ್ಸು ಹೋಗುತ್ತೀರಾ ಎಂದು ಕೇಳಿದರೆ ಬಸನಗೌಡ ಯತ್ನಾಳ್ ಹಾರಿಕೆಯ ಉತ್ತರ ನೀಡುತ್ತಾರೆ.
ದಾವಣಗೆರೆ, ಏಪ್ರಿಲ್ 23: ಬಿಜೆಪಿ ನಾಯಕರ ಜನಾಕ್ರೋಶ ಯಾತ್ರೆ ಉತ್ತರ ಕರ್ನಾಟಕದ ಎಲ್ಲ ಜಲ್ಲೆಗಳಲ್ಲ್ಲಿ ಪೂರ್ತಿಗೊಳ್ಳುವವರೆಗೆ ಸುಮ್ಮನಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ಟೀಕಿಸುವುದನ್ನು ಹೊಸ ಹುಮ್ಮಸ್ಸಿನೊಂದಿಗೆ ಮುಂದುವರಿಸಿದ್ದಾರೆ. ದಾವಣಗೆರೆಯಲ್ಲಿ ಮಾತಾಡಿದ ಅವರು, ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕೊಂದವರಿಗೆ ಮುತ್ತಿಡುವವವರನ್ನು ಯಡಿಯೂರಪ್ಪ ಗುಂಡಿಕ್ಕಿ ಕೊಲ್ಲಬೇಕೆನ್ನುತ್ತಾರೆ, ಆದರೆ; ಶಿವಮೊಗ್ಗ ಘಟನೆ, ಕೆಜೆಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ, ಹುಬ್ಬಳ್ಳಿ ಗಲಾಟೆ ನಡೆದಾಗ ಯಡಿಯೂರಪ್ಪನೇ ಮುಖ್ಯಮಂತ್ರಿಯಾಗಿದ್ದರು, ಆಗೇನೂ ಮಾಡದವರು ಈಗೇನು ಮಾಡುತ್ತಾರೆ? ಎಂದು ಕೇಳಿದ ಯತ್ನಾಳ್ ಅವರು ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಅಂತ ಹೇಳುತ್ತಿರುವುದನ್ನು ಗೇಲಿ ಮಾಡಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ