ತುಂಗಭದ್ರಾ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಸಲು ಕಾರ್ಮಿಕರು ಪಟ್ಟ ಶ್ರಮ ಹೇಗಿತ್ತು? ಮುಂದೇನು..?
ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಸ್ಟಾಪ್ ಲಾಗ್ ಅಳವಡಿಸಲಾಗಿದೆ. ಹಾಗಾದ್ರೆ, ಸ್ಟಾಪ್ ಲಾಗ್ ಅಳವಡಿಸಲು ಸಿಬ್ಬಂದಿ ಹೇಗೆಲ್ಲಾ ಶ್ರಮಪಟ್ಟಿದ್ದಾರೆ? ಈ ಸ್ಟಾಪ್ ಲಾಗ್ ಎಷ್ಟು ಭಾರ ಇದೆ? ಎನ್ನುವ ಸಂಪೂರ್ಣ ವಿವರನ್ನು ನಮ್ಮ ಕೊಪ್ಪಳ ಪ್ರತಿನಿಧಿ ಸಂಜಯ್ ಚಿಕ್ಕಮಠ ಅವರು ವಿವರಿಸಿದ್ದಾರೆ ನೋಡಿ.
ವಿಜಯನಗರ/ಕೊಪ್ಪಳ, ಆಗಸ್ಟ್ 16): ಭಗವಂತನ ಮೇಲೆ ಭಾರ ಹಾಕಿದ್ದ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಅವರ ತಂಡ ಟಿಬಿ ಡ್ಯಾಂ ಸ್ಟಾಪ್ ಲಾಗ್ ಅಳವಡಿಸೋ ಕಾರ್ಯ ಆರಂಭಿಸಿತ್ತು. ಈಗ ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಇದೀಗ ಮೊದಲ ಸ್ಟಾಪ್ ಲಾಗ್ ಅಳವಡಿಸಲಾಗಿದೆ. ಬಹಳ ಭಾರವಿರುವ ಸ್ಟಾಪ್ ಲಾಗ್ ಅನ್ನು ಎರಡು ಕ್ರೇನ್ ಮೂಲಕ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಇದು 25 ಟಿಎಂಸಿ ನೀರು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಡ್ಯಾಂ ತಂತ್ರಜ್ಞರ ತಂಡ ಇನ್ನುಳಿದ ಸ್ಟಾಪ್ ಲಾಗ್ ಅನ್ನು ನಾಳೆ ಬೆಳಿಗ್ಗೆಯಿಂದ ಹಂತ ಹಂತವಾಗಿ ಅಳವಡಿಕೆ ಮಾಡಲು ಮುಂದಾಗಿದೆ.
ಬಳ್ಳಾರಿಯ ಜಿಂದಾಲ್, ಹೊಸಪೇಟೆ ನಾರಾಯಣ ಇಂಜಿನಿಯರ್ಸ್ ಹಾಗೂ ಕೊಪ್ಪಳದ ಹಿಂದೂಸ್ತಾನ ಸ್ಟೀಲ್ಸ್ ವರ್ಕ್ಸ್‌ನಿಂದ ಈ ಸ್ಟಾಪ್ ಲಾಗ್ ತಯಾರಿಸಲಾಗಿತ್ತು. 80ಕ್ಕೂ ಹೆಚ್ಚು ಎಂಜಿನಿಯರ್ಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ ಮೊದಲ ಯಶಸ್ಸು ಸಿಕ್ಕಿದೆ. ಮೊದಲ ಸ್ಟಾಪ್ ಲಾಗ್ ಕಾರ್ಯ ಸಕ್ಸಸ್ ಆಗುತ್ತಿದ್ದಂತೆ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ನಾಳೆಯಿಂದ(ಆಗಸ್ಟ್ 17) ಉಳಿದ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಸಾಗಲಿದೆ. ಇನ್ನು ಸತತ ಎರಡು ದಿನಗಳ ನಿರಂತರ ಶ್ರಮ ಹೇಗಿತ್ತು? ಈ ಸ್ಟಾಪ್ ಲಾಗ್ ಅಳವಡಿಕೆಯಿಂದ ಏನು ಉಪಯೋಗವಾಗುತ್ತೆ? ಹೇಗೆಲ್ಲಾ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿ ಅಳವಡಿಸಲಾಯ್ತು ಎನ್ನುವ ಸಂಪೂರ್ಣ ವಿವರವನ್ನು ಕೊಪ್ಪಳದ ನಮ್ಮ ಪ್ರತಿನಿಧಿ ಸಂಜಯ್ ಚಿಕ್ಕಮಠ ಅವರು ವಿವರಿಸಿದ್ದಾರೆ ನೋಡಿ.
ಇದನ್ನೂ ಓದಿ: ರೈತರಿಗೆ ಗುಡ್ನ್ಯೂಸ್: ತುಂಗಭದ್ರಾ ಜಲಾಶಯದ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿ, ಸಿಹಿ ಹಂಚಿ ಸಂಭ್ರಮ