ಹರಪನಹಳ್ಳಿ: ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು

Edited By:

Updated on: Mar 14, 2025 | 8:45 AM

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ಕೋಳಿ ಫಾರ್ಮ್‌ನಲ್ಲಿನ 3000 ಕೋಳಿಗಳು ಇದ್ದಕ್ಕಿದ್ದಂತೆ ಸತ್ತಿವೆ. ತಜ್ಞ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಕ್ಕಿ ಜ್ವರದ ಲಕ್ಷಣಗಳು ಕಂಡುಬಂದಿಲ್ಲ. ವಿಷಪೂರಿತ ಆಹಾರ ಸೇವನೆಯಿಂದ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಮೂರು ತಿಂಗಳ ಹಿಂದೆ ಈ ಫಾರ್ಮ್ ಆರಂಭಿಸಿದ್ದ ಯುವಕ ಈ ಘಟನೆಯಿಂದ ಆಘಾತಕ್ಕೀಡಾಗಿದ್ದಾನೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಖಂಡಿಕೇರಿ ತಾಂಡಾ ನಿವಾಸಿ ಪರಮೇಶ್ ‌ನಾಯ್ಕ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿನ ಮೂರು ಸಾವಿರ ಕೋಳಿಗಳು ಇದ್ದಕ್ಕಿದ್ದಂತೆ ಮೃತಪಟ್ಟಿವೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಜ್ಞ ವೈದ್ಯರು ಕೋಳಿಗಳ ಮಾದರಿ ಸಂಗ್ರಹಿಸಿದ್ದಾರೆ. ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ವಿಷಪುರಿತ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಮಾದರಿ ಸಂಗ್ರಹಿಸಲಾಗಿದ್ದು, ಕೋಳಿಗಳ ಸಾವಿಗೆ ನಿಖರ ಕಾರಣ ‌ಪತ್ತೆಗೆ‌ ಕ್ರಮಕೈಗೊಳ್ಳಿತ್ತೇವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಯುವಕ ಪರಮೇಶ್ ನಾಯ್ಕ ಮೂರು ತಿಂಗಳ ಹಿಂದೆಯಷ್ಟೇ ಕೋಳಿ ಫಾರ್ಮ ಆರಂಭಿಸಿದ್ದರು. ಇದೀಗ, ಇದ್ದಕ್ಕಿದ್ದಂತೆ ಮೂರು ಸಾವಿರ ಕೋಳಿ ಮೃತಪಟ್ಟಿದ್ದು, ಆತಂಕ ಶುರುವಾಗಿದೆ. ಕೋಳಿ ಫಾರ್ಮ ಆರಂಭಿಸಿ ಸ್ವಾವಲಂಭಿ ಬದುಕು ನಡೆಸಲು ಮುಂದಾಗಿದ್ದ ಯುವಕ ಕೋಳಿಗಳ ಸಾವಿನಿಂದ ಶಾಕ್ ಆಗಿದ್ದಾರೆ.