Video:ಸನ್‌ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು, ಜ್ಯೋತಿರಾದಿತ್ಯ ಸಿಂಧಿಯಾ ಮಗನ ಎದೆಗೆ ಗಾಯ
ಕೇಂದ್ರ ಸಚಿವರ ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಸಿಂಧಿಯಾ ಸನ್ರೂಫ್ನಿಂದ ಕೈ ಬೀಸುತ್ತಿರುವಾಗ ಕಾರು ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಅವರ ಎದೆಗೆ ಪೆಟ್ಟಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಕೊಲಾರಸ್ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾಗ ಮಹಾನಾರ್ಯಮನ್ ಕಾರಿನ ಸನ್‌ರೂಫ್ ಬಳಿ ನಿಂತು ಬೆಂಬಲಿಗರಿಗೆ ಕೈ ಬೀಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಶಿವಪುರಿ, ಜನವರಿ 06: ಕೇಂದ್ರ ಸಚಿವರ ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಸಿಂಧಿಯಾ ಸನ್ರೂಫ್ನಿಂದ ಕೈ ಬೀಸುತ್ತಿರುವಾಗ ಕಾರು ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಅವರ ಎದೆಗೆ ಪೆಟ್ಟಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಕೊಲಾರಸ್ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾಗ ಮಹಾನಾರ್ಯಮನ್ ಕಾರಿನ ಸನ್‌ರೂಫ್ ಬಳಿ ನಿಂತು ಬೆಂಬಲಿಗರಿಗೆ ಕೈ ಬೀಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅವರಿಗೆ ಆರಂಭದಲ್ಲಿ ಯಾವುದೇ ಅಸ್ವಸ್ಥತೆ ಅನಿಸಲಿಲ್ಲ ಆದರೆ ನಂತರ ಎದೆ ನೋವು ಕಾಣಿಸಿಕೊಂಡಿತು ಮತ್ತು ಪರೀಕ್ಷೆಗಾಗಿ ಶಿವಪುರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಇಸಿಜಿ ಮತ್ತು ಎಕ್ಸ್-ರೇ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ನಡೆಸಿದರು ಮತ್ತು ಅವರ ಸ್ಥಿತಿ ಸ್ಥಿರವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

