ಒಂದು ಹಂತ ಮೇಲಕ್ಕೆ ಹೋದ ಯಶ್ ಫ್ಯಾನ್ಸ್; ಮೆಟ್ರೋದಲ್ಲೂ ಮಿಂಚಿದ ರಾಕಿಂಗ್ ಸ್ಟಾರ್
Yash Birthday: ನಟ ಯಶ್ ಜನ್ಮದಿನ ಜನವರಿ 8ರಂದು. ಫ್ಯಾನ್ಸ್ ಇದಕ್ಕಾಗಿ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈಗ ಮೆಟ್ರೋಗೆ ಯಶ್ ಅವರ ಫೋಟೋ ಹಾಕಲಾಗಿದೆ. ಈ ಸಂದರ್ಭದ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಕಮೆಂಟ್ಗಳು ಬಂದಿವೆ.
ನೆಚ್ಚಿನ ಹಿರೋನ ಬರ್ತ್ಡೇ ಎಂದಾಗ ಕಟೌಟ್ ಹಾಕಲಾಗುತ್ತದೆ. ಅದಕ್ಕೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಈಗ ಯಶ್ ಅಭಿಮಾನಿಗಳು ಒಂದು ಹಂತ ಮೇಲಕ್ಕೆ ಹೋಗಿದ್ದಾರೆ. ಜನವರಿ 8 ಯಶ್ ಜನ್ಮದಿನ. ಹೀಗಾಗಿ, ನಮ್ಮ ಮೆಟ್ರೋದಲ್ಲಿ ಯಶ್ ಫೋಟೋ ರಾರಾಜಿಸಲಿದೆ. ಅಭಿಮಾನಿ ಸಂಘಟನೆಗಳು ಮೆಟ್ರೋಗೆ ಜಾಹೀರಾತು ನೀಡಿ, ಯಶ್ಗೆ ಬರ್ತ್ಡೇ ವಿಶ್ ತಿಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 06, 2026 02:18 PM

