ಕೇಂದ್ರ ಸಚಿವ ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು: ಕಾರಣ ಏನು?
ಶಾಸಕ ಗಣಿಗ ರವಿಕುಮಾರ್ ಅವರು ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ. ಜಿಲ್ಲೆಯಲ್ಲಿ 100 ಎಕರೆ ಜಾಗ ಲಭ್ಯವಿದ್ದು, ಕೈಗಾರಿಕೆಗಳನ್ನು ತರುವಂತೆ ಮನವಿ ಮಾಡಿದ್ದಾರೆ. ರಾಜಕೀಯ ಕಲಹ ಬಿಟ್ಟು ಮಂಡ್ಯದ ಯುವಕರಿಗೆ ಉದ್ಯೋಗ ಸೃಷ್ಟಿಗೆ ಸಹಕರಿಸುವಂತೆ ಅವರು ಕರೆ ನೀಡಿದ್ದಾರೆ.
ಮಂಡ್ಯ, ಜನವರಿ 06: ಜಿಲ್ಲೆಗೆ ಕೈಗಾರಿಕೆ ತರುವ ವಿಚಾರವಾಗಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಾಗ ಇದೆ, ನೀವು ಇಂಡಸ್ಟ್ರಿ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ರಾಜ್ಯ ಸರ್ಕಾರ ಇಂಡಸ್ಟ್ರಿ ತರಲು ಸಹಕಾರ ಕೊಡ್ತಿಲ್ಲ, ಮಂಡ್ಯದಲ್ಲಿ ಇಂಡಸ್ಟ್ರಿ ಸ್ಥಾಪನೆಗೆ ಜಾಗ ಇಲ್ಲ ಎಂದು ಹೆಚ್ಡಿಕೆ ಹೇಳಿದ್ದರು. ಹೀಗಾಗಿ ಡಿಸಿ ಜೊತೆಗೆ ತೆರಳಿ ಇಂಡಸ್ಟ್ರಿ ಜಾಗ ಗುರುತಿಸಿದ ಗಣಿಗ ರವಿಕುಮಾರ್, ಇಂಡಸ್ಟ್ರಿ ಸ್ಥಾಪನೆಗೆ ಸೂಕ್ತ ಸ್ಥಳ, ಎಲ್ಲದಕ್ಕೂ ಸಹಕಾರ ಕೊಡುತ್ತೇವೆ. ಮಂಡ್ಯಕ್ಕೆ ಕೈಗಾರಿಕೆ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಆ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಕದನ ಮತ್ತೊಂದು ಹಂತಕ್ಕೆ ತಲುಪಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
