AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಕೊರೊನಾ ಆಪತ್ಕಾಲಕ್ಕೆ ಸುದೀಪ್ ಚಾರಿಟೇಬಲ್ ಟ್ರಸ್ಟ್ ಹೇಗೆ ತಯಾರಿ ನಡೆಸಿದೆ?; ವಿವರ ಇಲ್ಲಿದೆ

TV9 Web
| Updated By: shivaprasad.hs|

Updated on: Sep 01, 2021 | 2:37 PM

Share

Sudeep Birthday: ನಟ ಕಿಚ್ಚ ಸುದೀಪ್ ತಮ್ಮ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕೊರೊನಾ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಜನರಿಗೆ ನೆರವಾಗಿದ್ದರು. ತಜ್ಞರು ಕೊರೊನಾ ಮೂರನೇ ಅಲೆಯ ಸಂಭಾವ್ಯತೆಯನ್ನು ತಿಳಿಸಿರುವ ಹಿನ್ನೆಲೆಯಲ್ಲಿ, ಟ್ರಸ್ಟ್ ಯಾವೆಲ್ಲಾ ತಯಾರಿಗಳನ್ನು ನಡೆಸಿದೆ ಎಂಬುದನ್ನು ಟಿವಿ9ಗೆ ತಿಳಿಸಿದ್ದಾರೆ ಟ್ರಸ್ಟ್​ನ ರಮೇಶ್ ಕಿಟ್ಟಿ.

ಅಭಿನಯ ಚಕ್ರವರ್ತಿ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ ಕಿಚ್ಚ ಸುದೀಪ್ ನಾಳೆ (ಸೆಪ್ಟೆಂಬರ್ 2) ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಹಲವಾರು ಜನಪರ ಕಾರ್ಯಕ್ರಮಗಳನ್ನು ಕಿಚ್ಚ ಈಗಾಗಲೇ ನಡೆಸಿದ್ದಾರೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಅಸಹಾಯಕರಿಗೆ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೆರವನ್ನು ನೀಡಲಾಗಿತ್ತು. ಈ ನಡುವೆ ತಜ್ಞರು ಕೊರೊನಾ ಮೂರನೇ ಅಲೆಯ ಸಾಧ್ಯತೆಯನ್ನು ತಿಳಿಸಿರುವಾಗ, ಟ್ರಸ್ಟ್ ಯಾವ ರೀತಿಯ ತಯಾರಿ ನಡೆಸಿದೆ ಎಂಬುದನ್ನು ಟ್ರಸ್ಟ್​ನ ರಮೇಶ್ ಕಿಟ್ಟಿ ಟಿವಿ9ಗೆ ವಿವರಿಸಿದ್ದಾರೆ. ಇದೇ ವೇಳೆ ಅವರು ಕೋಟಿಗೊಬ್ಬ 3 ಬಿಡುಗಡೆಯ ಮಾಹಿತಿಯನ್ನೂ ನೀಡಿದ್ದಾರೆ.

ಇದನ್ನೂ ಓದಿ:

Kichcha Sudeep: ಕಿಚ್ಚ ಸುದೀಪ್​ ಬರ್ತ್​ಡೇಗೆ 12 ಕಾರ್ಯಕ್ರಮ; ಇಲ್ಲಿದೆ ಫುಲ್​ ಡಿಟೇಲ್ಸ್​

ಸುದೀಪ್​ಗೆ ನೀರಜ್​ ಚೋಪ್ರಾ ಕಡೆಯಿಂದ ಹುಟ್ಟುಹಬ್ಬದ ಶುಭಾಶಯ; ‘ವಿಕ್ರಾಂತ್ ರೋಣ’ಗೂ ವಿಶೇಷ ವಿಶ್

(Sudeep Charitable trust prepared for Covid third wave says Ramesh Kitty)