ಏಕಾಮೇವಾದ್ವಿತೀಯನಂತೆ ಮೆರೆಯುತ್ತಿದ್ದ ಮಹಿಂದ್ರ ಥಾರ್ಗೆ ಬರುತ್ತಿದೆ ಪ್ರತಿಸ್ಪರ್ಧಿ, ಫೋರ್ಸ್ ಗೂರ್ಖಾ ಸೆ. 15 ರಂದು ಮಾರ್ಕೆಟ್​ಗೆ

ಏಕಾಮೇವಾದ್ವಿತೀಯನಂತೆ ಮೆರೆಯುತ್ತಿದ್ದ ಮಹಿಂದ್ರ ಥಾರ್ಗೆ ಬರುತ್ತಿದೆ ಪ್ರತಿಸ್ಪರ್ಧಿ, ಫೋರ್ಸ್ ಗೂರ್ಖಾ ಸೆ. 15 ರಂದು ಮಾರ್ಕೆಟ್​ಗೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2021 | 4:08 PM

ಹಬ್ಬದ ಸೀಸನ್ನಲ್ಲಿ ಲಾಂಚ್ ಆಗುತ್ತಿರುವ ಹಲವಾರು ಹೊಸ ಫೋರ್-ವ್ಹೀಲರ್ ಮತ್ತು ಟೂ-ವ್ಹೀಲರ್ಗಳ ಸಾಲಿಗೆ ಫೋರ್ಸ್ ಗೂರ್ಖಾ ಸಹ ಸೇರಲಿದೆ. ಮಹಿಂದ್ರಾ ಥಾರ್ ಎಸ್ ಯು ವಿಗೆ ಫೋರ್ಸ್ ಗೂರ್ಖಾ ತೀವ್ರ ಪೈಪೋಟಿ ನೀಡಲಿದೆ ಎಂದು ಮಾರ್ಕೆಟ್ ತಜ್ಞರು ಹೇಳುತ್ತಿದ್ದಾರೆ.

ಫೋರ್ಸ್ ಮೋಟಾರ್ಸ್ ಸಂಸ್ಥೆಯು ಹೊಸ ಪೋರ್ಸ್ ಗೂರ್ಖಾ ಲಾಂಚ್ ಮಾಡುವ ಬಗ್ಗೆ ಕೆಲ ವಾರಗಳಿಂದ ವದಂತಿ ಹರಡಿತ್ತು. ವಾಹನವನ್ನು ಮಾರ್ಕೆಟ್ಗೆ ಬಿಡುಗಡೆ ಮಾಡುವ ಕುರಿತು ಕಂಪನಿಯ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಆಗಿದ್ದು ನೀವು ನೋಡಿರುತ್ತೀರಿ. ನೀವು ನಿರ್ದಿಷ್ಟವಾಗಿ ಈ ವಾಹನಕ್ಕಾಗಿ ಕಾಯುತ್ತಿದ್ದರೆ, ನಿಮ್ಮ ಕಾಯುವಿಕೆ ಇಷ್ಟರಲ್ಲೇ ಕೊನೆಗೊಳ್ಳಲಿದೆ. ಯಾಕೆ ಗೊತ್ತಾ? ನಮಗೆ ಸಿಕ್ಕಿರುವ ಖಚಿತ ಮಾಹಿತಿಯ ಪ್ರಕಾರ ಫೋರ್ಸ್ ಗೂರ್ಖಾ ಇದೇ ತಿಂಗಳು 15 ರಂದು ಮಾರ್ಕೆಟ್​ಗೆ ಬರಲಿದೆ. ಹಬ್ಬದ ಸೀಸನ್ನಲ್ಲಿ ಲಾಂಚ್ ಆಗುತ್ತಿರುವ ಹಲವಾರು ಹೊಸ ಫೋರ್-ವ್ಹೀಲರ್ ಮತ್ತು ಟೂ-ವ್ಹೀಲರ್ಗಳ ಸಾಲಿಗೆ ಫೋರ್ಸ್ ಗೂರ್ಖಾ ಸಹ ಸೇರಲಿದೆ. ಮಹಿಂದ್ರಾ ಥಾರ್ ಎಸ್ ಯು ವಿಗೆ ಫೋರ್ಸ್ ಗೂರ್ಖಾ ತೀವ್ರ ಪೈಪೋಟಿ ನೀಡಲಿದೆ ಎಂದು ಮಾರ್ಕೆಟ್ ತಜ್ಞರು ಹೇಳುತ್ತಿದ್ದಾರೆ. ಮಹಿಂದ್ರಾ ಥಾರ್ ಹೊರತಾಗಿ ಇದು ಮಾರುತಿ ಸುಜುಕಿ ಜಿಮ್ನಿಗೂ ಪ್ರತಿಸ್ಪರ್ಧಿ ಎನಿಸಲಿದೆ.

ಹೊಸ ಫೋರ್ಸ್ ಗೂರ್ಖಾದಲ್ಲಿ ಪವರ್ ಬಿಎಸ್6, 2.6-ಲೀಟರ್, ಮರ್ಸಿಡಿಸ್ ಅವಿಷ್ಕೃತ ಡೀಸೆಲ್ ಎಂಜಿನ್ ನಿಂದ 90 ಬಿಹೆಚ್ ಪಿ ಮತ್ತು 280 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಅಭಿವೃದ್ಧಿಪಡಿಸಿದ, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಜೊತೆಗೆ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಸಿಗುತ್ತದೆ. ಫೋರ್ಸ್ ಹೊಸ ಗೂರ್ಖಾವನ್ನು ಸ್ವತಂತ್ರ ಮುಂಭಾಗದ ಸಸ್ಪೆನ್ಷನ್ ಮತ್ತು ಬಿಗಿ ಹಿಂಭಾಗದ-ಆಕ್ಸಲ್ ಜೊತೆಗೆ ಗಂಭೀರ ಸ್ವರೂಪ ಆಫ್-ರೋಡಿಂಗ್ ಖಚಿತಪಡಿಸುತ್ತದೆ. ಹೊಸ ಫೋರ್ಸ್ ಗೂರ್ಖಾವನ್ನು 3-ಬಾಗಿಲು ಮತ್ತು 5-ಬಾಗಿಲು-ಎರಡು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಅದರ ಹೊರಭಾಗ ಮತ್ತು ಒಳಗಡೆ ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

ವಿನ್ಯಾಸಕ್ಕೆ ಸಂಬಂಧಿಸಿದಂತೆ, ಹೊಸ ಗೂರ್ಖಾ ಆಫ್-ರೋಡ್ ಎಸ್‌ಯುವಿ ಹೊಸ ಸೆಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಮತ್ತು ಹೊಸ ಗ್ರಿಲ್ ಅನ್ನು ಹೊಂದಿದ್ದು, ಇದು ಮೊದಲಿನ ಮಾಡೆಲ್ಗಳಿಗಿಂತ ಹೆಚ್ಚು ಎದ್ದು ಕಾಣಲಿದೆ. ನೋಡಲು ಗಟ್ಟಿಮುಟ್ಟಿಯಾಗಿ ಕಾಣುವ ಫೋರ್ಸ್ ಗೂರ್ಖಾ ಬೆಲೆ ರೂ. 10 ಲಕ್ಷದ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Shocking Video: ಫ್ಯಾನ್​ ಅಳವಡಿಸಬೇಕಿದ್ದ ಮನೆಯ ಮೇಲ್ಛಾವಣಿಯ ರಂಧ್ರದಲ್ಲಿ ತಲೆ ಸಿಲುಕಿಸಿಕೊಂಡ ಬಾಲಕಿ! ಭಯಾನಕ ವಿಡಿಯೋ ವೈರಲ್