ಕಲಬುರಗಿಯ ಶರಣಬಸವೇಶ್ವರ ದೇವಾಲಯದ ನಂದಾದೀಪದ ಬಗ್ಗೆ ನಿಮಗೆ ಗೊತ್ತಾ? ವಿಡಿಯೋ ನೋಡಿ
ಶರಣಬಸವೇಶ್ವರ ದೇವಾಸ್ಥಾನಕ್ಕೆ ಸಂಬಂಧಿಸಿದಂತೆ ಒಂದು ದಂತಕತೆ ಇದೆ. ಶರಣಬಸವೇಶ್ವರ ಅವರು ಜೀವಂತರಾಗಿದ್ದಾಗ, ಶಿವನನ್ನು ತಮ್ಮ ದೇಹದಲ್ಲಿ ಬರಮಾಡಿಕೊಂಡು ಈ ಸ್ಥಳದಲ್ಲಿ ಒಂದು ದೀಪ ಹೊತ್ತಿಸಿ ಆರಾಧನೆ ಮಾಡುತ್ತಿದ್ದರಂತೆ.
ಕಲಬುರಗಿಯ ಶರಣಬಸವೇಶ್ವರ ದೇವಾಲಯದ ಬಗ್ಗೆ ಕೇಳದ ಕನ್ನಡಿಗರು ತುಂಬಾ ವಿರಳ. ಹಳೆ ಮೈಸೂರು ಭಾಗದ ಜನ ಅಥವಾ ಕರ್ನಾಟಕ ಕರಾವಳಿ ಪ್ರದೇಶದವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದಾಗ ಕಲಬುರಗಿವರೆಗೆ ಹೋಗಿ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಮರೆಯುವುದಿಲ್ಲ. ಇಲ್ಲಿ ಪ್ರತಿ ವರ್ಷ ಜಾತ್ರೆಯಾಗುತ್ತದೆ. ಶರಣಬಸವೇಶ್ವರರನ್ನು ಈ ಭಾಗದ ಜನರೆಲ್ಲ ಭಕ್ತಿಭಾವದಿಂದ ‘ಅಪ್ಪ’ ಎಂದು ಸಂಬೋಧಿಸುವುದರಿಂದ ಸದರಿ ಜಾತ್ರೆಯನ್ನು ‘ಅಪ್ಪುನ್ ಜಾತ್ರೆ’ ಅಂತ ಕರೆಯುತ್ತಾರೆ. ಜಾತ್ರೆಯಲ್ಲಿ ಅಕ್ಕಪಕ್ಕ ರಾಜ್ಯದವರೂ ಸೇರಿದಂತೆ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಅಪ್ಪುನ್ ಜಾತ್ರೆ ಆದ ಕೆಲವೇ ದಿನಗಳ ನಂತರ ಕಲಬುರಗಿಯಲ್ಲಿ ಖಾಜಾ ಬಂದೆನವಾಜ್ ಉರುಸ್ (ಜಾತ್ರೆ) ನಡೆಯುತ್ತದೆ.
ಶರಣಬಸವೇಶ್ವರ ದೇವಾಸ್ಥಾನಕ್ಕೆ ಸಂಬಂಧಿಸಿದಂತೆ ಒಂದು ದಂತಕತೆ ಇದೆ. ಶರಣಬಸವೇಶ್ವರ ಅವರು ಜೀವಂತರಾಗಿದ್ದಾಗ, ಶಿವನನ್ನು ತಮ್ಮ ದೇಹದಲ್ಲಿ ಬರಮಾಡಿಕೊಂಡು ಈ ಸ್ಥಳದಲ್ಲಿ ಒಂದು ದೀಪ ಹೊತ್ತಿಸಿ ಆರಾಧನೆ ಮಾಡುತ್ತಿದ್ದರಂತೆ. ಇದನ್ನು ಅವರು 40 ವರ್ಷಗಳ ಕಾಲ ಸತತವಾಗಿ ಮಾಡಿದರು ಅಂತ ಇತಿಹಾಸ ಬಲ್ಲವರು ಹೇಳುತ್ತಾರೆ. ಆರಾಧನೆ ಸಮಯದಲ್ಲಿ ಅವರು ಹಚ್ಚುತ್ತಿದ್ದ ದೀಪ ಅನೇಕ ವರ್ಷಗಳ ನಂತರವೂ ಆರದೆ ಹಾಗೆ ಉಳಿದಿದೆ. ಹಾಗಾಗಿ, ಆದನ್ನು ನಂದಾದೀಪ ಎಂದು ಕರೆಯುತ್ತಾರೆ.
ಪ್ರತಿ ಸೋಮವಾರ ಶರಣಬಸವೇಶ್ವರ ಗುಡಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ, ಶ್ರಾವಣ ಮಾಸದ ಸೋಮವಾರಗಳಲ್ಲಂತೂ ಉತ್ಸವದ ರೀತಿಯಲ್ಲಿ ಪೂಜೆ-ಪುನಸ್ಕಾರ ಇಲ್ಲಿ ನಡೆಯುತ್ತವೆ.
ಇದನ್ನೂ ಓದಿ: 6,522 ಮೀಟರ್ ಎತ್ತರದಲ್ಲಿ ಎರಡು ಏರ್ ಬಲೂನ್ಗಳ ನಡುವಿನ ಹಲಗೆಯ ಮೇಲೆ ನಡೆದು ಸಾಗಿದ ವ್ಯಕ್ತಿ; ಮೈ ಜುಂ ಎನ್ನಿಸುವ ವಿಡಿಯೋ ವೈರಲ್