Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಫ್ಯಾನ್​ ಅಳವಡಿಸಬೇಕಿದ್ದ ಮನೆಯ ಮೇಲ್ಛಾವಣಿಯ ರಂಧ್ರದಲ್ಲಿ ತಲೆ ಸಿಲುಕಿಸಿಕೊಂಡ ಬಾಲಕಿ! ಭಯಾನಕ ವಿಡಿಯೋ ವೈರಲ್

Viral Video: ಫ್ಯಾನ್ ಅಳವಡಿಸಲೆಂದು ಮನೆಯ ಗೋಡೆಯ ಮೂಲೆಯಲ್ಲಿ ರಂಧ್ರವನ್ನು ಬಿಡಲಾಗಿದೆ. ಬಾಲಕಿಗೆ ಗೊತ್ತಾಗದೇ ಒಂದನೇ ಮಹಡಿಯಿಂದ ಇಣುಕಿ ನೋಡಲು ಹೋಗಿದ್ದಾಳೆ. ಅಚಾನಕ್ಆಗಿ ತಲೆ ಸಿಲುಕಿಕೊಂಡು ತಲೆ ಕೆಳಗಾಗಿ ನಿಂತಿದ್ದಾಳೆ. ಭಯಾನಕ ವಿಡಿಯೋ ವೈರಲ್ ಆಗಿದೆ.

Shocking Video: ಫ್ಯಾನ್​ ಅಳವಡಿಸಬೇಕಿದ್ದ ಮನೆಯ ಮೇಲ್ಛಾವಣಿಯ ರಂಧ್ರದಲ್ಲಿ ತಲೆ ಸಿಲುಕಿಸಿಕೊಂಡ ಬಾಲಕಿ! ಭಯಾನಕ ವಿಡಿಯೋ ವೈರಲ್
ಫ್ಯಾನ್​ ಅಳವಡಿಸಬೇಕಿದ್ದ ಮನೆಯ ಮೇಲ್ಛಾವಣಿಯ ರಂಧ್ರದಲ್ಲಿ ತಲೆ ಸಿಲುಕಿಸಿಕೊಂಡ ಬಾಲಕಿ! ಭಯಾನಕ ವಿಡಿಯೋ ವೈರಲ್
Follow us
TV9 Web
| Updated By: shruti hegde

Updated on: Sep 01, 2021 | 10:27 AM

ಮನೆಯ ಮೇಲ್ಛಾವಣಿಗೆ ಸೀಲಿಂಗ್ ಫ್ಯಾನ್ ಅಳವಡಿಸಲೆಂದು ಮಾಡಿದ್ದ ರಂಧ್ರಕ್ಕೆ ಬಾಲಕಿ ತಲೆ ಸಿಲುಕಿಸಿಕೊಂಡ ಘಟನೆ ನಡೆದಿದೆ. ಭಯಾನಕ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಫುಲ್ ವೈರಲ್ ಅಗಿದೆ. ಬಾಲಕಿಗೆ ಸೀಲಿಂಕ್ ಫ್ಯಾನ್ ಅಳವಡಿಸಲು ಮಾಡಿದ ರಂಧ್ರವೆಂದು ತಿಳಿಯದೇ ಅಚಾನಕ್ಆಗಿ ರಂಧ್ರದಲ್ಲಿ ಇಣುಕಿ ನೋಡಲು ಮುಂದಾಗಿದ್ದಾಳೆ. ಮೊದಲನೇ ಮಹಿಡಿಯಿಂದ ಬಾಲಕಿ ಉಲ್ಟಾ ನಿಂತಿದ್ದಾಳೆ. ಕೆಳಗಿನಿಂದ ನೋಡಿದ ಮನೆಯ ಸಿಬ್ಬಂದಿ, ರಂಧ್ರದೊಳಗೆ ಬಾಲಕಿಯ ತಲೆ ಕೂದಲು ಕಂಡ ಕಂಗಾಲಾಗಿದ್ದಾರೆ.

ಘಟನೆ ಚೀನಾದಲ್ಲಿ ನಡೆದಿದೆ. ಫ್ಯಾನ್ ಅಳವಡಿಸಲೆಂದು ಮನೆಯ ಗೋಡೆಯ ಮೂಲೆಯಲ್ಲಿ ರಂಧ್ರವನ್ನು ಬಿಡಲಾಗಿದೆ. ಬಾಲಕಿಗೆ ಗೊತ್ತಾಗದೇ ಒಂದನೇ ಮಹಡಿಯಿಂದ ಇಣುಕಿ ನೋಡಲು ಹೋಗಿದ್ದಾಳೆ. ಅಚಾನಕ್ಆಗಿ ತಲೆ ಸಿಲುಕಿಕೊಂಡು ತಲೆ ಕೆಳಗಾಗಿ ನಿಂತಿದ್ದಾಳೆ. ಭಯಾನಕ ವಿಡಿಯೋ ವೈರಲ್ ಆಗಿದೆ.

ಮಗಳನ್ನು ರಕ್ಷಿಸಲು ಮನೆಯವರು ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೆಳಗಿನಿಂದ ನೋಡಿದಾಗ ರಂಧ್ರದೊಳಗಿನಿಂದ ಬಾಲಕಿಯ ತಲೆಯ ಕೂದಲು ನೇತಾಡುತ್ತಿರುವುದನ್ನು ಕಂಡುಕೊಂಡರು. ಕೆಳಗಿನಿಂದ ತಲೆಯನ್ನು ತಳ್ಳುತ್ತಾ, ಮೊದಲನೇಯ ಮಹಡಿಯಲ್ಲಿದ್ದ ರಕ್ಷಕರು ಬಾಲಕಿಯನ್ನು ನಿಧಾನವಾಗಿ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನ ವ್ಯರ್ಥವಾಗಿದೆ.

ಬಳಿಕ ಗಿಡಮೂಲಿಕೆಗಳಿಂದ ತಯಾರಿಸಿದ ಎಣ್ಣೆಯನ್ನು ಬಾಲಕಿಯ ತಲೆಗೆ ಹಚ್ಚಿ ನಂತರ ಬಾಲಕಿಯ ತಲೆಯನ್ನು ರಂಧ್ರದಿಂದ ಹೊರತೆಗೆದಿದ್ದಾರೆ. ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರಕ್ಷಣಾ ತಂಡ ಸುಮಾರು 40 ನಿಮಿಷಗಳ ಕಾಲ ಬಾಲಕಿಯನ್ನು ರಕ್ಷಿಸಲು ಹೋರಾಡಿದ್ದಾರೆ.

ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯಾವುದೇ ಹಾನಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕೂದಲು ನೇತಾಡುತ್ತಿರುವ ದೃಶ್ಯ ನೋಡಿದರೆ ನಿಜವಾಗಿಯೂ ಒಮ್ಮೆಲೆ ಭಯವಾಯಿತು ಎಂದು ಓರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಾಲಕಿಗೆ ಯಾವುದೇ ಅಪಾಯವಾಗಿಲ್ಲ ಎಂಬುದು ಸಮಾಧಾನ ತಂದಿರುವ ವಿಷಯ ಎಂದು ಮತ್ತೋರ್ವರು ಹೇಳಿದ್ದಾರೆ. ಈ ದೃಶ್ಯವನ್ನು ರಾತ್ರಿ ನೋಡಬಾರದು, ಕೂದಲು ನೇತಾಡುತ್ತಿರುವ ದೃಶ್ಯ ತುಂಬಾ ಭಯಾನಕವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಇದನ್ನೂ ಓದಿ:

Shocking Video: ಫ್ಯಾಮಿಲಿ ಡಿನ್ನರ್ ವೇಳೆ ಮಗುವಿನ ಪಕ್ಕದಲ್ಲೇ ಮುರಿದು ಬಿತ್ತು ಸೀಲಿಂಗ್ ಫ್ಯಾನ್; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು

(Girl Head stuck in ceiling video goes viral )

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ