Viral Video: ಹಾರುತ್ತಿರುವ ಡ್ರೋನ್ ಹಿಡಿದು ಜಗಿದ ಮೊಸಳೆ; ವಿಡಿಯೋ ನೋಡಿ
ಡ್ರೋನ್ ಹಿಡಿದ ಮೊಸಳೆ ಬಾಯಿಯಲ್ಲಿ ಅಗಿಯುತ್ತಿದ್ದಂತೆಯೇ ಹೊಗೆ ಬರಲಾರಂಭಿಸಿದೆ. ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಪ್ರಾಣಿಗಳನ್ನು ಅತಿ ಹತ್ತಿರದಿಂದ ಚಿತ್ರೀಕರಿಸಲು ಡ್ರೋನ್ ಬಳಸುತ್ತಾರೆ. ಕೆಲವು ಬಾರಿ ಪ್ರಾಣಿಗಳ ವಿಡಿಯೋ ಮಾಡುವಾಗ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುವ ವಿಡಿಯೋವೊಂದು ಫುಲ್ ವೈರಲ್ ಆಗಿದೆ. ಡ್ರೋನ್ ಮೂಲಕ ಅಲಿಗೇಟರ್ ಮೊಸಳೆಯ ವಿಡಿಯೋ ಮಾಡುತ್ತಿರುವಾಗ, ಗಾಳಿಯಲ್ಲಿ ಹಾರುತ್ತಿರುವ ಡ್ರೋನ್ಅನ್ನು ಮೊಸಳೆ ಹಾರಿ ಹಿಡಿದಿದೆ. ಯಾವುದೋ ಕೀಟವೆಂದು ಭಾವಿಸಿದ ಮೊಸಳೆ ಬಾಯಿಯಲ್ಲಿ ಅಗಿಯುತ್ತಿದೆ. ಇದರ ಪರಿಣಾಮ ಡ್ರೋನ್ ಒಡೆದು ಹೊಗೆ ಬರಲಾರಂಭಿಸಿದೆ. ಭಯಾನಕ ವಿಡಿಯೋ ವೈರಲ್ ಆಗಿದೆ.
ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಡ್ರೋನ್ ಹಿಡಿದ ಮೊಸಳೆ ಬಾಯಿಯಲ್ಲಿ ಅಗಿಯುತ್ತಿದ್ದಂತೆಯೇ ಹೊಗೆ ಬರಲಾರಂಭಿಸಿದೆ. ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
Alligator snatches drone out of the air and it promptly catches fire in its mouth https://t.co/vDfidrrhsz
— Chris Anderson (@chr1sa) September 1, 2021
ಡ್ರೋನ್ ಸೆನ್ಸರ್ ಮೊಸಳೆಯ ಕ್ಲೋಸ್ ಅಪ್ ಶಾಟ್ ಪಡೆಯಲು ಆಪರೇಟರ್ ಮುಂದಾದರು ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹರಿಬಿಡಲಾಗಿದೆ. ಗಾಳಿಯಲ್ಲಿ ಹಾರುತ್ತಿದ್ದ ಡ್ರೋನ್ಅನ್ನು ಹಾರಿ ಹಿಡಿದ ಮೊಸಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.
ಕ್ಯಾಲಿಫೋರ್ನಿಯಾದ ಡ್ರೋನ್ ಕಂಪನಿಯಾದ 3ಆರ್ಡಿ ಸಂಸ್ಥಾಪಕ ಮತ್ತು ಮಾಜಿ ಸಿಇಒ ಕ್ರಿಸ್ ಆಂಡರ್ಸನ್ ಇಂದು ಬೆಳಿಗ್ಗೆ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮೊಸಳೆ, ಡ್ರೋನ್ಅನ್ನು ಕಸಿದುಕೊಳ್ಳುತ್ತದೆ ಪರಿಣಾಮ ತಕ್ಷಣವೇ ಬಾಯಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಡಿಯೋ ಕ್ಲಿಪ್ನಲ್ಲಿ ಬರೆದಿದ್ದಾರೆ.
ಈ ವಿಡಿಯೋ ಅನೇಕ ರೀಟ್ವೀಟ್ ಪಡೆದುಕೊಂಡಿದೆ. ಜತೆಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಡ್ರೋನ್ಗಳನ್ನು ಪ್ರಾಣಿಗಳ ಸುತ್ತಲೂ ಸುಳಿಯುವಂತೆ ಮಾಡಿದಾಗ ಹೆಚ್ಚು ಗಮನವಿರಬೇಕು ಎಂದು ಓರ್ವರು ಹೇಳಿದ್ದಾರೆ. ಇದು ಹೆಚ್ಚು ನೋವುಂಟು ಮಾಡುವ ಸಂಗತಿ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಇದು ಕಲ್ಲಂಗಡಿ ಆದ್ರೆ ವಾಟರ್ಮೆಲನ್ ಅಲ್ಲ: ಖತರ್ನಾಕ್ ಪ್ಲ್ಯಾನ್ ಮಾಡಿ ಸಿಕ್ಕಿ ಬಿದ್ದ ಖದೀಮರು
Viral Video: ಲೂಸಿಯಾನದಲ್ಲಿ ಇಡಾ ಚಂಡಮಾರುತದ ಅಬ್ಬರ; ಹಿಮ್ಮುಖವಾಗಿ ಹರಿಯಿತು ಮಿಸಿಸಿಪ್ಪಿ ನದಿ
(Alligator eats drone shocking video goes viral)
Published On - 1:17 pm, Wed, 1 September 21