ಸುದೀಪ್ ಪುತ್ರಿ ಗಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ: ಅಪ್ಪನ ಬೆಂಬಲದ ಬಗ್ಗೆ ಸಾನ್ವಿ ಮಾತನಾಡಿದ್ದಾರೆ
Sudeep Daughter: ನಟ ಸುದೀಪ್ ಪುತ್ರಿ ಸಾನ್ವಿ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ತಮ್ಮ ಈ ಸಾಹಸಕ್ಕೆ ಅಪ್ಪನ ಬೆಂಬಲ ಹೇಗಿತ್ತು, ಅವರೇ ಮಾತನಾಡಿದ್ದಾರೆ...
ಸುದೀಪ್ (Sudeep) ಪುತ್ರಿ ಸಾನ್ವಿ ಗಾಯಕಿಯಾಗಿ ಚಿತ್ರರಂಗಕ್ಕೆ (Sandalwood) ಕಾಲಿಟ್ಟಿದ್ದಾರೆ. ಸುದೀಪ್ರ ಸಹೋದರಿಯ ಮಗ ಸಂಚಿತ್ ಜಿಮ್ಮಿ ಹೆಸರಿನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೆಂದರೆ ಇದೇ ಸಿನಿಮಾ ಮೂಲಕ ಗಾಯಕಿಯಾಗಿ ಸುದೀಪ್ ಪುತ್ರಿ ಸಾನ್ವಿ ಸಹ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಜಿಮ್ಮಿ ಸಿನಿಮಾಕ್ಕಾಗಿ ಇಂಗ್ಲೀಷ್ ಹಾಡೊಂದನ್ನು ಬರೆದಿರುವ ಸಾನ್ವಿ ಹಾಡನ್ನು ತಾವೇ ಹಾಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹಾಡು ಹಾಡಿ ನೆರೆದವರಿಂದ ಶಹಭಾಷ್ ಎನಿಸಿಕೊಂಡರು ಸಾನ್ವಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 27, 2023 11:15 PM