‘ದರ್ಶನ್ ಜೈಲಲ್ಲಿ ರೌಡಿಗಳಲ್ಲದೇ ಇನ್ಯಾರ ಜತೆ ಇರೋಕೆ ಸಾಧ್ಯ?’: ಸುಮಲತಾ ಸಮರ್ಥನೆ
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ನಟೋರಿಯಸ್ ರೌಡಿಗಳ ಸಹವಾಸ ಬೆಳೆದಿದೆ. ರೌಡಿಶೀಟರ್ಗಳ ಜೊತೆ ದರ್ಶನ್ ಇರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಹೇಳಿಕೆ ನೀಡಿದ್ದಾರೆ. ದರ್ಶನ್ ರೌಡಿಗಳ ಜೊತೆ ಇರುವುದನ್ನು ಸುಮಲತಾ ಸಮರ್ಥನೆ ಮಾಡಿಕೊಂಡಿದ್ದಾರೆ.
‘ಜೈಲಿನಲ್ಲಿ ಯಾರಪ್ಪಾ ಇರುತ್ತಾರೆ? ಜೊತೆಯಲ್ಲಿ ಓಡಾಡಲು, ಮಾತಾಡಲು ಜೈಲಲ್ಲಿ ಇನ್ಯಾರು ಸಿಕ್ತಾರೆ? ಅಲ್ಲಿ ಇರುವುದೇ ಕ್ರಿಮಿನಲ್ಸ್’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರು ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಮುಂತಾದವರ ಜೊತೆ ಇರುವ ಫೋಟೋ ವೈರಲ್ ಆಗಿರುವುದಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.