ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಆನೆಕೊಂಡ ಬಸವೇಶ್ವರ ಕಾರ್ಣೀಕ

ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಆನೆಕೊಂಡ ಬಸವೇಶ್ವರ ಕಾರ್ಣೀಕ

ಕಿರಣ್ ಹನುಮಂತ್​ ಮಾದಾರ್
|

Updated on: Aug 27, 2024 | 4:02 PM

ಪ್ರತಿವರ್ಷದಂತೆ ಈ ಬಾರಿ ಕೂಡ ದಾವಣಗೆರೆಯ ಆನೆಕೊಂಡ ಬಸವೇಶ್ವರ ಜಾತ್ರೆ ಅದ್ದೂರಿ ನಡೆದಿದ್ದು, ಪೂಜಾರಿ ಅವರು ಕಾರ್ಣಿಕ ನುಡಿದಿದ್ದಾರೆ. ‘ ‘ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ ಎನ್ನುವ ಮೂಲಕ ಬರುವ ದಿನಗಳ ಭವಿಷ್ಯವನ್ನು ತಿಳಿಸಿದ್ದಾರೆ.

ದಾವಣಗೆರೆ, ಆ.27: ಶತ ಶತಮಾನಗಳಿಂದ ನಡೆದುಕೊಂಡು ಬಂದಿರುವ ಐತಿಹಾಸಿಕ ದಾವಣಗೆರೆ ನಗರದ ಆನೆಕೊಂಡ ಬಸವೇಶ್ವರ ದೇವರ ಕಾರ್ಣೀಕವನ್ನ ಪ್ರತಿಬಾರಿಯಂತೆ ಸಾವಿರಾರು ಜನ ಸಮ್ಮುಖದಲ್ಲಿ ಪೂಜಾರಿ ಅವರು ನುಡಿದಿದ್ದಾರೆ. ‘ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ. ಮುತ್ತೈದರ ಭೂತಾಯಿ ಉಡಿ ತುಂಬಿರಲೆ, ನರ ಲೋಕದ ಜನಕೆ ದೃಷ್ಟಿ ಹೆಚ್ಚಿತಲೇ ಎಂದಿದ್ದಾರೆ. ಇದರ ಅರ್ಥ ನೋಡುವುದಾದರೆ ‘ಬರುವ ದಿನಗಳಲ್ಲಿ ನಾಡಿಗೆ, ದೇಶಕ್ಕೆ ಒಳ್ಳೆಯದಾಗಲಿ ಎಂದು ಕಾರ್ಣೀಕದ ಸಾರಾಂಶವಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ