ಅಮೇರಿಕದ ಜೈಲುಗಳಲ್ಲೂ ಕೈದಿಗಳು ಫೋನ್ ಬಳಸುತ್ತಾರೆ, ಡ್ರಗ್ಸ್ ಸಿಗುತ್ತವೆ: ಸುಮಲತಾ ಅಂಬರೀಶ್
ಲೋಕಸಭಾ ಚುನಾವಣೆಯ ನಂತರ ರಾಜಕೀಯದಿಂದ ದೂರ ಇರುವ ಸುಮಲತಾ ಮಾತಿನ ತಾತ್ಪರ್ಯ ಅರ್ಥವಾಗಲ್ಲ, ಅಮೇರಿಕ ಜೈಲುಗಳಲ್ಲಿ ಡ್ರಗ್ಸ್ ಸರಬರಾಜು ಅಗುತ್ತಿದ್ದರೆ ಭಾರತ ಅಥವಾ ಬೆಂಗಳೂರು ಜೈಲುಗಳಲ್ಲೂ ಅಂಥದ್ದು ನಡೆಯಬೇಕೇ? ಸ್ವಂತ ಮಗನೆಂದು ಪರಿಗಣಿಸುವ ದರ್ಶನ್ ಸಮರ್ಥನೆಗಾಗಿ ಅವರು ಹೀಗೆ ಹೇಳಿದರೇ?
ಬೆಂಗಳೂರು: ಜೈಲಲ್ಲಿ ಕೆಲ ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದೆ ಸುಮಲತಾ ಅಂಬರೀಶ್, ಅಮೇರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳ ಜೈಲುಗಳಲ್ಲಿ ಕೈದಿಗಳು ಫೋನ್ ಬಳಸುತ್ತಾರೆ, ಡ್ರಗ್ಸ್ ಪೂರೈಕೆಯಾಗುತ್ತದೆ ಮತ್ತು ಉಳಿದೆಲ್ಲ ಅವ್ಯವಹಾರಗಳು ನಡೆಯುತ್ತವೆ. ಕೇವಲ ಬೆಂಗಳೂರು ಸೆಂಟ್ರಲ್ ಜೈಲನ್ನು ದೂರುವುದು ಸರಿಯಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ಗೆ ಎಣ್ಣೆ-ಬಾಡೂಟ, ನನ್ನ ಮಗನಿಗೆ ಜೈಲೂಟವಾದರೂ ಸರಿಯಾಗಿ ಸಿಗುತ್ತಿದೆಯಾ ಅಂತ ಗೊತ್ತಿಲ್ಲ: ಆರೋಪಿ ನಂದೀಶ್ ತಂದೆ
Latest Videos