‘ಬಂದ್ ಬಗ್ಗೆ ಮಾತನಾಡಲ್ಲ ಆದರೆ, ಈ ಹೋರಾಟಕ್ಕೆ ನನ್ನ ಬೆಂಬಲ ಇದೆ’; ಸುಮಲತಾ
ಕನ್ನಡ ಚಿತ್ರರಂಗದ ಕಡೆಯಿಂದ ಈ ಬಂದ್ಗೆ ನೈತಿಕ ಬೆಂಬಲ ಮಾತ್ರ ನೀಡಲಾಗುತ್ತಿದೆ. ಈ ವಿಚಾರದ ಬಗ್ಗೆ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಮಾತನಾಡಿದ್ದಾರೆ.
ಕನ್ನಡದ ಬಾವುಟಕ್ಕೆ ಅವಮಾನ, ಎಂಇಎಸ್ ಪುಂಡಾಟಿಕೆ ಖಂಡಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ. ಕನ್ನಡ ಚಿತ್ರರಂಗದ ಕಡೆಯಿಂದ ಈ ಬಂದ್ಗೆ ನೈತಿಕ ಬೆಂಬಲ ಮಾತ್ರ ನೀಡಲಾಗುತ್ತಿದೆ. ಈ ವಿಚಾರದ ಬಗ್ಗೆ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಮಾತನಾಡಿದ್ದಾರೆ. ‘ಬಂದ್ನಿಂದ ನಷ್ಟ ಆಗುತ್ತದೆ. ಈ ಬಂದ್ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗೋದಾದರೆ ನಾನು ಖಂಡಿತವಾಗಿಯೂ ಬೆಂಬಲ ನೀಡುತ್ತೇನೆ. ಆದರೆ, ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತದೆ. ಕೇವಲ ಸಿನಿಮಾ ರಂಗ ಎಂದು ನಾನು ಹೇಳುತ್ತಿಲ್ಲ. ಡಿಸೆಂಬರ್ 31ರಂದು ಸಾಕಷ್ಟು ಅಂಗಡಿಗಳಿಗೆ ಹೆಚ್ಚು ವ್ಯಾಪಾರ ಆಗುತ್ತದೆ. ಆದರೆ ಬಂದ್ ಮಾಡಿದರೆ ಇದರಿಂದ ಅವರಿಗೆ ನಷ್ಟ ಉಂಟಾಗುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಮಹಿಳೆ ಹುಟ್ಟಿನಿಂದಲೇ ಸಾಧಕಿ, ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುತ್ತಾಳೆ; ಸುಮಲತಾ ಅಂಬರೀಶ್
Loading...
Unable to load recommendations.
Follow Us
