ಸುಮಲತಾ ಅವರಿಗೆ ರಾಜಕಾರಣದಲ್ಲೂ ಅಪಾರ ಜ್ಞಾನವಿದೆ, ಅವರಿಗಿರುವಷ್ಟು ತಿಳುವಳಿಕೆ ನನಗಿಲ್ಲ: ಎನ್ ಚಲುವರಾಯಸ್ವಾಮಿ

Updated on: Mar 07, 2024 | 2:02 PM

ಅವರು ಬಹಳ ವರ್ಷಗಳ ಕಾಲ ಕಲಾವಿದೆಯಾಗಿದ್ದವರು, ಅಂಬರೀಶ್ ಜೊತೆ ದೀರ್ಘ ಸಮಯದವರೆಗೆ ಕಲಾಸೇವೆ ಮಾಡಿ ಈಗ ಸಂಸದೆಯಾಗಿ ರಾಜಕಾರಣದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ, ಹಾಗಾಗಿ ಅವರಷ್ಟು ತನಗೆ ಗೊತ್ತಿಲ್ಲ ಎಂದು ಹೇಳಿದರು. ನಿನ್ನೆ ಕಾಂಗ್ರೆಸ್ ಮುಖಂಡರನ್ನು ತೀವ್ರವಾಗಿ ಟೀಕಿಸಿರುವ ಡಾ ರವೀಂದ್ರ ಅವರ ಬಗ್ಗೆ ತಾನು ಕಾಮೆಂಟ್ ಮಾಡಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ನಡುವೆ ಕಳೆದ ಕೆಲ ವಾರಗಳಿಂದ ಕೋಳಿ ಜಗಳ ನಡೆಯುತ್ತಿದೆ. ಇವರ ಕಾಮೆಂಟ್ ಗಳಿಗೆ ಅವರು ಮತ್ತು ಅವರ ಕಾಮೆಂಟ್ ಗಳಿಗೆ ಇವರು ಪ್ರತಿಕ್ರಿಯೆ ನೀಡೋದು ಸಾಮಾನ್ಯವಾಗಿದೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಚಲುವರಾಯಸ್ವಾಮಿ, ಸುಮಲತಾ ಅವರು ಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಬಿಜೆಪಿ ಟಿಕೆಟ್ ಗಿಟ್ಟಿಸಲು ಭಗೀರಥ ಪ್ರಯತ್ನ ನಡೆಸಿದ್ದಾರೆ, ಹಾಗಿರುವಾಗ ಮೇಡಂ ಮತ್ತೊಬ್ಬ ಆಕಾಂಕ್ಷಿಯನ್ನು ಶಿಫಾರಸ್ಸು ಮಾಡೋಕಾಗುತ್ತಾ ಎಂದು ಪ್ರಶ್ನಿಸಿದರು. ಚಲುವರಾಯಸ್ವಾಮಿ ಅವರು ಬಹಳ ವರ್ಷಗಳಿಂದ ಬೆಂಗಳೂರಲ್ಲಿರುವುದರಿಂದ ಅವರಿಗೆ ನಾಟಿ ಕೋಳಿ ರುಚಿ ಗೊತ್ತಿಲ್ಲ ಅಂತ ಸುಮಲತಾ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ತನಗೇನೂ ಗೊತ್ತಿಲ್ಲ, ಅವರು ಬಹಳ ವರ್ಷಗಳ ಕಾಲ ಕಲಾವಿದೆಯಾಗಿದ್ದವರು, ಅಂಬರೀಶ್ ಜೊತೆ ದೀರ್ಘ ಸಮಯದವರೆಗೆ ಕಲಾಸೇವೆ ಮಾಡಿ ಈಗ ಸಂಸದೆಯಾಗಿ ರಾಜಕಾರಣದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ, ಹಾಗಾಗಿ ಅವರಷ್ಟು ತನಗೆ ಗೊತ್ತಿಲ್ಲ ಎಂದು ಹೇಳಿದರು. ನಿನ್ನೆ ಕಾಂಗ್ರೆಸ್ ಮುಖಂಡರನ್ನು ತೀವ್ರವಾಗಿ ಟೀಕಿಸಿರುವ ಡಾ ರವೀಂದ್ರ ಅವರ ಬಗ್ಗೆ ತಾನು ಕಾಮೆಂಟ್ ಮಾಡಲ್ಲ ಎಂದು ಚಲುವರಾಯಸ್ವಾಮಿ, ಅವರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೂ ಸುಮಲತಾ ಅಂಬರೀಶ್ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ: ಹನಕೆರೆ ಶಶಿಕುಮಾರ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More