Video: ಸಾವಿರಾರು ವರುಷಗಳ ದೇಗುಲ ಅದು- ಇಂದು ಸೂರ್ಯ ಕಿರಣಗಳು ಅಲ್ಲಿನ ಗರ್ಭಗುಡಿಯಲ್ಲಿದ್ದ ಶಿವಲಿಂಗವನ್ನು ತಾಗಿದವು! ಎಲ್ಲಿ?

|

Updated on: Sep 26, 2023 | 11:11 AM

ಶಿವಪುತ್ರ ಗಣೇಶನ ಹಬ್ಬದ ಸಂದರ್ಭದಲ್ಲಿ ಹನುಮಕೊಂಡದ ಸಿದ್ಧೇಶ್ವರಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ವರ್ಷದಲ್ಲಿ ಮೂರು ದಿನ ಮಾತ್ರ ಬೀಳುತ್ತದೆ. ನಮ್ಮ ಬೆಂಗಳೂರು ನಗರದ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿಯೂ ಮಕರ ಸಂಕ್ರಾಂತಿಯ ದಿನ ಸೂರ್ಯ ರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಘಳಿಗೆ ಸಂಜೆಗೆ ಘಟಿಸುತ್ತದೆ ಎಂಬುದು ಗಮನಾರ್ಹ.

ವಾರಂಗಲ್, ಸೆಪ್ಟೆಂಬರ್​ 26: ​​ ಜಿಲ್ಲೆಯ ಹನುಮಕೊಂಡದ ಸಿದ್ಧೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಶಿವಲೀಲೆ ಪವಾಡದ ಬಗ್ಗೆ ಓದಿ ತಿಳಿದುಕೊಂಡಿರಿ. ಅದೀಗ ಸದೃಶಗೊಂಡಿದೆ. ಸೂರ್ಯನಾರಾಯಣ ಕಿರಣಗಳು ಗರ್ಭಗುಡಿಯಲ್ಲಿದ್ದ ಶಿವಲಿಂಗವನ್ನು ಸ್ಪರ್ಶಿಸಿದೆ. ಈ ಪವಾಡವು ವರ್ಷದಲ್ಲಿ ಎರಡು ಬಾರಿ ಸಾಕ್ಷಿಯಾಗುತ್ತದೆ. ಇದು ಗಣೇಶನ ಹಬ್ಬ ಮತ್ತು ನವರಾತ್ರಿ ಹಬ್ಬಗಳ ಸಂದರ್ಭದಲ್ಲಿ ಮಾತ್ರ ನಡೆಯುವುದು ವಿಶೇಷವಾಗಿದೆ. ಇಲ್ಲಿನ ಶಿವನನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಭಕ್ತರು ಮಹಾನ್ ಭಾವಭಕ್ತಿಯೊಂದಿಗೆ ಕಾದಿದ್ದು ಸೂರ್ಯ ಕಿರಣಗಳು ಶಿವಲಿಂಗ ಸ್ಪರ್ಶಿಸುವುದಕ್ಕೆ ಸಾಕ್ಷೀಭೂತರಾದರು. ಶಿವಪುತ್ರ ಗಣೇಶನ ಹಬ್ಬದ (Ganesh Chaturthi) ಸಂದರ್ಭದಲ್ಲಿ ಇಲ್ಲಿನ ಸಿದ್ಧೇಶ್ವರಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ವರ್ಷದಲ್ಲಿ ಮೂರು ದಿನ ಮಾತ್ರ ಬೀಳುತ್ತದೆ. ನಮ್ಮ ಬೆಂಗಳೂರು ನಗರದ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿಯೂ ಮಕರ ಸಂಕ್ರಾಂತಿಯ ದಿನ ಸೂರ್ಯ ರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಘಳಿಗೆ ಸಂಜೆಗೆ ಘಟಿಸುತ್ತದೆ ಎಂಬುದು ಗಮನಾರ್ಹ.

ಹನುಮಕೊಂಡದ ಸಿದ್ಧೇಶ್ವರಸ್ವಾಮಿ ದೇವಸ್ಥಾನದಲ್ಲಿ ಲಿಂಗ ರೂಪದಲ್ಲಿ ಇಂದೊಂದು ಅದ್ಭುತ ದೃಶ್ಯ ತೆರೆದುಕೊಂಡಿತು. ಶಿವನ ಕಿರಣಗಳು ಗರ್ಭಗುಡಿಯಲ್ಲಿದ್ದ ಶಿವಲಿಂಗವನ್ನು ಸ್ಪರ್ಶಿಸಿದವು. ಈ ಪವಾಡ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಇದು ನೋಡಲೇಬೇಕಾದ ದೃಶ್ಯ. ಇದು ಗಣಪತಿ ಹಬ್ಬ ಮತ್ತು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾತ್ರ ನಡೆಯುವುದು ವಿಶೇಷವಾಗಿದೆ. ಇದೆಲ್ಲವೂ ಶಿವನ ಹಿರಿಮೆ ಎಂದು ಭಕ್ತರು ನಂಬುತ್ತಾರೆ.

Also Read: ಕೌತುಕಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರನ‌ ಸನ್ನಿಧಿ, ಲಿಂಗ ಸ್ಪರ್ಶಿಸಲಿದ್ದಾನೆ ಸೂರ್ಯ

ಸೂರ್ಯ ನಾರಾಯಣ ಮತ್ತು ಶಿವನನ್ನು ಕಿರಣಗಳ ರೂಪದಲ್ಲಿ ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬಂದಿದ್ದರು. ಹನುಮಕೊಂಡದಲ್ಲಿ ಪೂಜಿಸಲ್ಪಡುತ್ತಿರುವ ಸಿದ್ಧೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ದೇವಸ್ಥಾನದ ಮುಂಭಾಗದ ನಂದಿ ಮಂಟಪ, 3 ಮುಖ್ಯ ದ್ವಾರಗಳ ಮೂಲಕ ಸಾಗಿ, ಗರ್ಭಗುಡಿಯಲ್ಲಿ ಸ್ಥಾಪಿತ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ರಾರಾಜಿಸಿದವು.

Also Read: Kakatiya era temple: ಶಿವಲೀಲೆ! ಗಣೇಶನ ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ

ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿದಾಗ, ಶಿವ ಕೇಶವರ ಪ್ರಭಾವದಿಂದ ಅದು ಮತ್ತಷ್ಟು ಹೆಚ್ಚು ಶಕ್ತಿಶಾಲಿಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಭಕ್ತರು ವಿಶೇಷ ಪೂಜೆ ಮತ್ತು ಅಭಿಷೇಕಗಳನ್ನು ಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 26, 2023 11:09 AM