Video: ನಾಡೆಲ್ಲಾರಿಂದ ಸುಂದರ್ ಪಿಚ್ಚೈವರೆಗೆ ಟ್ರಂಪ್ ಔತಣ ಕೂಟದಲ್ಲಿ ಯಾರ್ಯಾರಿದ್ರು?, ಮಸ್ಕ್​ ಗೈರು

Updated on: Sep 05, 2025 | 11:24 AM

ಜಗತ್ತಿನಲ್ಲಿ ಸುಂಕ ಯುದ್ಧವನ್ನು ಆರಂಭಿಸಿರುವ ಡೊನಾಲ್ಡ್​ ಟ್ರಂಪ್ ಶ್ವೇತಭವನದಲ್ಲಿ ಭವ್ಯ ಭೋಜನ ಕೂಟವನ್ನು ಸಿದ್ಧಪಡಿಸಿದ್ದರು. 5 ಭಾರತೀಯ-ಅಮೇರಿಕನ್ ಸಿಇಒಗಳು ಸೇರಿದಂತೆ ಅಮೆರಿಕದ ಅನೇಕ ದೊಡ್ಡ ತಂತ್ರಜ್ಞಾನ ಉದ್ಯಮಿಗಳು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಮೈಕ್ರಾನ್ ಟೆಕ್ನಾಲಜೀಸ್ ಸಿಇಒ ಸಂಜಯ್ ಮೆಹ್ರೋತ್ರಾ, ಟಿಐಬಿಸಿಒ ಅಧ್ಯಕ್ಷ ವಿವೇಕ್ ರಣದಿವೆ ಮತ್ತು ಪಳಂತಿರ್ ಸಿಟಿಒ ಶ್ಯಾಮ್ ಶಂಕರ್ ಪಾಲ್ಗೊಂಡಿದ್ದರು. ಆದರೆ ಎಲಾನ್ ಮಸ್ಕ್​ ಇರಲಿಲ್ಲ.

ವಾಷಿಂಗ್ಟನ್​​, ಸೆಪ್ಟೆಂಬರ್ 05: ಜಗತ್ತಿನಲ್ಲಿ ಸುಂಕ ಯುದ್ಧವನ್ನು ಆರಂಭಿಸಿರುವ ಡೊನಾಲ್ಡ್ಟ್ರಂಪ್ ಶ್ವೇತಭವನದಲ್ಲಿ ಭವ್ಯ ಭೋಜನ ಕೂಟವನ್ನು  ಏರ್ಪಡಿಸಿದ್ದರು. 5 ಭಾರತೀಯ-ಅಮೇರಿಕನ್ ಸಿಇಒಗಳು ಸೇರಿದಂತೆ ಅಮೆರಿಕದ ಅನೇಕ ದೊಡ್ಡ ತಂತ್ರಜ್ಞಾನ ಉದ್ಯಮಿಗಳು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಮೈಕ್ರಾನ್ ಟೆಕ್ನಾಲಜೀಸ್ ಸಿಇಒ ಸಂಜಯ್ ಮೆಹ್ರೋತ್ರಾ, ಟಿಐಬಿಸಿಒ ಅಧ್ಯಕ್ಷ ವಿವೇಕ್ ರಣದಿವೆ ಮತ್ತು ಪಳಂತಿರ್ ಸಿಟಿಒ ಶ್ಯಾಮ್ ಶಂಕರ್ ಪಾಲ್ಗೊಂಡಿದ್ದರು. ಆದರೆ ಎಲಾನ್ ಮಸ್ಕ್ಇರಲಿಲ್ಲ.

ಇದಲ್ಲದೆ, ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಆಪಲ್ ಸಿಇಒ ಟಿಮ್ ಕುಕ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, ಒರಾಕಲ್ ಸಿಇಒ ಸರ್ಫ್ರಾ ಕ್ಯಾಟ್ಜ್ ಕೂಡ ಇದ್ದರು. ಈ ಎಲ್ಲಾ ಕಂಪನಿಗಳು ಭಾರತದಲ್ಲಿ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ