ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಆಫರ್ ಬಂದಿತ್ತು: ಮಂಡ್ಯದಲ್ಲಿ ಯೂಟ್ಯೂಬರ್ ಗಂಭೀರ ಆರೋಪ
ಧರ್ಮಸ್ಥಳದ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ವ್ಯವಸ್ಥಿತ ಷಡ್ಯಂತ್ರ ನಡೆಸಿತ್ತು. ಇದರ ಹಿಂದೆ 400 ರಿಂದ 500 ಟ್ರೋಲ್ ಪೇಜಸ್ ಕೆಲಸ ಮಾಡಿರುವುದಾಗಿ ಮಂಡ್ಯದ ಯೂಟ್ಯೂಬರ್ ಸುಮಂತ್ ಗಂಭೀರ ಆರೋಪ ಮಾಡಿದ್ದಾರೆ. ತಮಗೂ ಹಣದ ಆಮಿಷವೊಡ್ಡಲಾಗಿತ್ತು ಎಂದಿರುವ ಅವರು, ಷಡ್ಯಂತ್ರದ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ವಿಡಿಯೋ ಇಲ್ಲಿದೆ.
ಮಂಡ್ಯ, ಸೆಪ್ಟೆಂಬರ್ 5: ಧರ್ಮಸ್ಥಳದ ವಿರುದ್ದ ವಿಡಿಯೋ ಮಾಡಲು ಹಣದ ಆಮಿಷವೊಡ್ಡಿದ್ದರು ಎಂದು ಮಂಡ್ಯದ ಯೂಟ್ಯೂಬರ್ ಸುಮಂತ್ ಆರೋಪಿಸಿದ್ದಾರೆ. ಎರಡು ವರ್ಷದ ಹಿಂದಿನಿಂದ ಚಂದನ್ ಗೌಡ ಪರಿಚಯ ಇದೆ. 5 ತಿಂಗಳ ಹಿಂದೆ ಚಂದನ್ ಅವರ ಬಟ್ಟೆ ಅಂಗಡಿ ಉದ್ಘಾಟನೆ ಇತ್ತು. ಅಲ್ಲಿಗೆ ಹೋಗಿದ್ದಾಗ ಯೂಟ್ಯೂಬರ್ ಅಭಿಷೇಕ್ (ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಿದ್ದ ಯೂಟ್ಯೂಬರ್. ಸದ್ಯ ಎಸ್ಐಟಿ ವಿಚಾರಣೆ ಎದುರಿಸುತ್ತಿದ್ದಾರೆ) ಬಂದಿದ್ದರು. ಆ ಸಂದರ್ಭದಲ್ಲಿ ಅಭಿ ಅವರು ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಹಣದ ಆಮಿಷವೊಡ್ಡಿದ್ದರು ಎಂದು ಸುಮಂತ್ ಹೇಳಿದ್ದಾರೆ. ಅಲ್ಲದೆ, 400-500 ಟ್ರೋಲ್ ಪೇಜಸ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮಟ್ಟಣ್ಣವರ್ ನೇತೃತ್ವದಲ್ಲಿ ಏನೇನು ಷಡ್ಯಂತ್ರ ನಡೆದಿತ್ತು ಎಂಬ ಬಗ್ಗೆ ಅಭಿಯಿಂದ ಎಳೆಎಳೆಯಾಗಿ ‘ಟಿವಿ9’ ಜತೆ ಬಿಚ್ಚಿಟ್ಟಾದರೆ. ವಿಡಿಯೋ ಇಲ್ಲಿದೆ.
Latest Videos
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
