ಕ್ರಿಕೆಟ್ ಆಡುತ್ತಿದ್ದವರಿಗೆ ಕ್ವಾಟ್ಲೆ ಕೊಟ್ಟ ಮಂಗ: ದಿಕ್ಕಾಪಾಲಾಗಿ ಓಡಿದ ಯುವಕರು
ಗದಗದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಮಂಗವೊಂದು ಕ್ವಾಟ್ಲೆ ಕೊಟ್ಟಿದೆ. ಮಂಗನ ಕಾಟಕ್ಕೆ ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ. ಕೊನೆಗೆ ಯುವಕರು ಬ್ಯಾಟ್‌ನಿಂದ ಮಂಗವನ್ನು ಹೆದರಿಸಿ ಅಲ್ಲಿಂದ ಓಡಿಸಿದ್ದಾರೆ. ಮಂಗನಾಟಕ್ಕೆ ಕೆಲ ಯುವಕರು ಬಿದ್ದು ಬಿದ್ದು ನಕ್ಕಿದ್ದಾರೆ. ವಿಡಿಯೋ ನೋಡಿ.
ಗದಗ, ಸೆಪ್ಟೆಂಬರ್ 05: ಮಂಗನಾಟಕ್ಕೆ (Monkey) ಕ್ರಿಕೆಟ್ ಆಡುತ್ತಿದ್ದ ಯುವಕರು ದಿಕ್ಕಾಪಾಲಾಗಿರುವಂತಹ ಘಟನೆಯೊಂದು ನಗರದ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ನಡೆದಿದೆ. ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಪ್ರತ್ಯೇಕ್ಷವಾದ ಮಂಗ ಯುವಕರಿಗೆ ಕ್ರಿಕೆಟ್ ಆಡಲು ಬಿಟ್ಟಿಲ್ಲ. ಮೈದಾನದ ತುಂಬೆಲ್ಲಾ ಅಟ್ಟಾಡಿಸಿದೆ. ಯುವಕರು ರಕ್ಷಣೆಗಾಗಿ ಕಲ್ಲು ಹಿಡಿದು ನಿಂತ್ತಿದ್ದರು. ಬಳಿಕ ಹೆದರಿಸಿ ಮಂಗನನ್ನು ಅಲ್ಲಿಂದ ಓಡಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
