ಮೈಸೂರು ದಸರಾ ಹಾಡು ಬಿಡುಗಡೆ, ರಾಜೇಶ್ ಕೃಷ್ಣನ್ ಕಂಠ ಸಿರಿಯಲ್ಲಿ ಮೊಳಗಿದ ಹಾಡು, ವಿಡಿಯೋ ಇಲ್ಲಿದೆ ನೋಡಿ
Mysuru Dasara Song: ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಕಂಠದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಅಧಿಕೃತ ಗೀತೆ ಮೂಡಿಬಂದಿದ್ದು, ಇದೀಗ ಸಾರ್ವಜನಿಕರಿಗೆ ಬಿಡುಗಡೆಯಾಗಿದೆ. ಮೈಸೂರು ಅರಮನೆ, ಜಂಬೂಸವಾರಿ, ಚಾಮುಂಡಿಬೆಟ್ಟ, ದಸರಾ ಕಾರ್ಯಕ್ರಮಗಳ ವಿಡಿಯೋ ಸೇರಿದಂತೆ ಒಟ್ಟಾರೆಯಾಗಿದಸರಾ ವೈಭವದ ತುಣುಕುಗಳನ್ನು ಒಳಗೊಂಡ ವಿಡಿಯೋ ಇಲ್ಲಿದೆ ನೋಡಿ.
ಮೈಸೂರು, ಸೆಪ್ಟೆಂಬರ್ 5: ವಿಶ್ವವಿಖ್ಯಾತ ಮೈಸೂರು ದಸರಾ 2025 ರ ಅಧಿಕೃತ ಗೀತೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ನಾಡಹಬ್ಬ ದಸರೆಯ ಗೀತೆಯನ್ನು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಮಾರ್ಗದರ್ಶನದಲ್ಲಿ ರಚಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಡಾ ಶಿವರಾಜ್ ಸಾಹಿತ್ಯ, ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ದಸರಾ ಗೀತೆ ಮೂಡಿಬಂದಿದೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಗೀತೆ ಹಾಡಿದ್ದಾರೆ. ಜಂಬೂಸವಾರಿ, ಮೈಸೂರು ಅರಮನೆ, ಚಾಮುಂಡಿಬೆಟ್ಟ, ದಸರಾ ಕಾರ್ಯಕ್ರಮಗಳ ವಿಡಿಯೋ ಒಳಗೊಂಡ ದಸರಾ ಗೀತೆಯ ವಿಡಿಯೋ ಇಲ್ಲಿದೆ.
