ಬೆಂಗಳೂರಿನಲ್ಲಿ ವೀಕೆಂಡ್ ಮಸ್ತಿಗೆ ಬ್ರೇಕ್, ಈ ವಾರವೂ ರಾಜಧಾನಿ ಲಾಕ್
[lazy-load-videos-and-sticky-control id=”47aJQzZot7Y”]ಬೆಂಗಳೂರು: ಕಳೆದ ವಾರದಂತೇ ಈ ವಾರವೂ ವೀಕೆಂಡ್ ವೇಳೆ ಸಿಲಿಕಾನ್ ಸಿಟಿ ರಸ್ತೆಗಳು ಕ್ಲೋಸ್. ಫ್ಲೈಓವರ್‌ಗಳು ಬಂದ್. ಅಂಗಡಿ ಮುಂಗಟ್ಟುಗಳೂ ಲಾಕ್. ಇಡೀ ಸಿಲಿಕಾನ್ ಸಿಟಿ ಇಂದು ರಾತ್ರಿ 8 ಗಂಟೆ ಸಂಪೂರ್ಣ ಸ್ತಬ್ಧವಾಗಿಬಿಡುತ್ತೆ. ಪ್ರತಿನಿತ್ಯ ಸುನಾಮಿಯಂತೆ ಬಂದಪ್ಪಳಿಸುತ್ತಿರೋ ಸೋಂಕಿಗೆ ರಾಜಧಾನಿ ಬೆಂಗಳೂರು ಬೆಚ್ಚಿಬೀಳ್ತಿದೆ. ಇದನ್ನ ಕಂಟ್ರೋಲ್ ಮಾಡೋ ಸಲುವಾಗಿ ಸರ್ಕಾರ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿದೆ. ಹೀಗಾಗಿ ಇಂದು ರಾತ್ರಿಯಿಂದ ರಾಜಧಾನಿ ಬೆಂಗಳೂರು ಲಾಕ್ ಆಗಲಿದೆ. ಇಂದು ರಾತ್ರಿಯಿಂದ ಬೆಂಗಳೂರು ಸಂಪೂರ್ಣ […]
[lazy-load-videos-and-sticky-control id=”47aJQzZot7Y”]ಬೆಂಗಳೂರು: ಕಳೆದ ವಾರದಂತೇ ಈ ವಾರವೂ ವೀಕೆಂಡ್ ವೇಳೆ ಸಿಲಿಕಾನ್ ಸಿಟಿ ರಸ್ತೆಗಳು ಕ್ಲೋಸ್. ಫ್ಲೈಓವರ್‌ಗಳು ಬಂದ್. ಅಂಗಡಿ ಮುಂಗಟ್ಟುಗಳೂ ಲಾಕ್. ಇಡೀ ಸಿಲಿಕಾನ್ ಸಿಟಿ ಇಂದು ರಾತ್ರಿ 8 ಗಂಟೆ ಸಂಪೂರ್ಣ ಸ್ತಬ್ಧವಾಗಿಬಿಡುತ್ತೆ. ಪ್ರತಿನಿತ್ಯ ಸುನಾಮಿಯಂತೆ ಬಂದಪ್ಪಳಿಸುತ್ತಿರೋ ಸೋಂಕಿಗೆ ರಾಜಧಾನಿ ಬೆಂಗಳೂರು ಬೆಚ್ಚಿಬೀಳ್ತಿದೆ. ಇದನ್ನ ಕಂಟ್ರೋಲ್ ಮಾಡೋ ಸಲುವಾಗಿ ಸರ್ಕಾರ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿದೆ. ಹೀಗಾಗಿ ಇಂದು ರಾತ್ರಿಯಿಂದ ರಾಜಧಾನಿ ಬೆಂಗಳೂರು ಲಾಕ್ ಆಗಲಿದೆ.
ಇಂದು ರಾತ್ರಿಯಿಂದ ಬೆಂಗಳೂರು ಸಂಪೂರ್ಣ ಲಾಕ್‌ಡೌನ್ ಕೊರೊನಾ ದಾಳಿಯಿಂದ ಕಂಗೆಟ್ಟಿರೋ ಸರ್ಕಾರಕ್ಕೆ ಸೋಂಕಿನ ಸುನಾಮಿಯನ್ನ ತಡೆಯಲು ಭಾನುವಾರ ಲಾಕ್‌ಡೌನ್ ಜಾರಿ ಮಾಡಿದೆ. ಅದರಂತೆ ಪ್ರತಿ ಭಾನುವಾರವೂ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗುತ್ತಿದೆ. ಕಳೆದ ವಾರದಂತೆ ಈ ವಾರವೂ ಕೂಡ ಯಾರೂ ಮನೆಯಿಂದ ಹೊರಬರೋ ಹಾಗಿಲ್ಲ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಎಲ್ಲರೂ ಮನೆಯಲ್ಲೇ ಲಾಕ್ ಆಗಬೇಕು.
ರಾಜ್ಯಾದ್ಯಂತ ಸೆಕ್ಷನ್ 144 ಕೂಡ ಜಾರಿಯಲ್ಲಿರಲಿದೆ. ಕರ್ಫ್ಯೂ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಬಂದರೇ ಕೇಸ್ ದಾಖಲಿಸಲಾಗುತ್ತೆ. ಕೇವಲ ತುರ್ತು ಹಾಗೂ ಅಗತ್ಯ ಸೇವೆಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಅನಗತ್ಯವಾಗಿ ವಾಹನಗಳನ್ನ ರಸ್ತೆಗೆ ಇಳಿಸಿದ್ರೆ ಪೊಲೀಸರು ಈ ಹಿಂದಿನಂತೆ ಸೀಜ್ ಮಾಡಲಿದ್ದಾರೆ. ಇನ್ನು ಬೆಂಗಳೂರಿನ ಫ್ಲೈಓವರ್, ಪ್ರಮುಖ ರಸ್ತೆ ಹಾಗೂ ಅಂಡರ್ ಪಾಸ್‌ಗಳನ್ನ ಬಂದ್ ಮಾಡಲಾಗುವುದು. ಸಾರ್ವಜನಿಕ ಸಾರಿಗೆ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿರಲಿದೆ. ಹೋಟೆಲ್ಗಳು, ರೆಸ್ಟೋರೆಂಟ್, ಪಬ್ ಕಂಪ್ಲೀಟ್ ಕ್ಲೋಸ್. ಜೊತೆಗೆ, ಪ್ರವಾಸಿ ತಾಣಗಳು, ಮಾಲ್ಗಳು, ದೇಗುಲಗಳು ಕೂಡ ಕ್ಲೋಸ್ ಆಗಲಿದ್ದು, ವಿಕೆಂಡ್ ಮೋಜು ಮಸ್ತಿಗೂ ಬ್ರೇಕ್ ಬೀಳಲಿದೆ.
ಒಟ್ನಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಂಕಿನ ಸುನಾಮಿ ಸ್ಫೋಟಗೊಳ್ಳುತ್ತಿದ್ದು, ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ, ಇಂದು ರಾತ್ರಿಯಿಂದಲೇ ರಾಜಧಾನಿ ಮತ್ತೆ ಸಂಪೂರ್ಣ ಲಾಕ್ ಆಗಲಿದ್ದು, ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಅಂದ್ರೆ 33 ಗಂಟೆಗಳ ಕಾಲ ಎಲ್ಲರೂ ಮನೆಯಲ್ಲೇ ಲಾಕ್ ಆಗ್ಬೇಕು. ಹಾಗಾಗಿ ಎಲ್ಲರೂ ಏನೇ ಖರೀದಿ ಮಾಡೋದಿದ್ರೂ ರಾತ್ರಿ 8 ಗಂಟೆಯೊಳಗೆಯೇ ಖರೀದಿ ಮಾಡೋದು ಉತ್ತಮ.
Published On - 8:06 am, Sat, 11 July 20