ಕೊರಾನಾ ವಿರುದ್ಧ ಸಮರ, ಜುಲೈ 14ರಿಂದ ಬೆಂಗಳೂರಿನಲ್ಲಿ ಮತ್ತೆ ಒಂದು ವಾರ ಲಾಕ್‌ಡೌನ್
[lazy-load-videos-and-sticky-control id=”8V6BzbrRy5w”] ಬೆಂಗಳೂರು: ಜುಲೈ 14ರಿಂದ ಬೆಂಗಳೂರು ಮತ್ತೇ ಒಂದು ವಾರ ಕಾಲ ಲಾಕ್ ಡೌನ್ ಆಗಲಿದೆ. ಈ ಸಂಬಂಧ ಹಿರಿಯ ಸಚಿವರೊಡನೆ ಚರ್ಚೆ ನಡೆಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಈಗ ಅಧಿಕೃತವಾಗಿಯೇ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಜುಲೈ 14ರ ಮಂಗಳವಾರದಿಂದ ಒಂದು ವಾರ ಕಾಲ ಬೆಂಗಳೂರು ಲಾಕ್‌ಡೌನ್ ಆಗಲಿದೆ. ಮಂಗಳವಾರ ರಾತ್ರಿ 8ಗಂಟೆಯಿಂದ ಲಾಕ್ ಡೌನ್ ಜಾರಿಯಾಗುತ್ತೆ. ಬೆಂಗಳೂರಿನಲ್ಲಿ ಮಿತಿ ಮೀರಿ ಹಬ್ಬುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಇದು ಅನಿವಾರ್ಯವಾಗಿದೆ. […]
[lazy-load-videos-and-sticky-control id=”8V6BzbrRy5w”]
ಬೆಂಗಳೂರು: ಜುಲೈ 14ರಿಂದ ಬೆಂಗಳೂರು ಮತ್ತೇ ಒಂದು ವಾರ ಕಾಲ ಲಾಕ್ ಡೌನ್ ಆಗಲಿದೆ. ಈ ಸಂಬಂಧ ಹಿರಿಯ ಸಚಿವರೊಡನೆ ಚರ್ಚೆ ನಡೆಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಈಗ ಅಧಿಕೃತವಾಗಿಯೇ ಘೋಷಣೆ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಜುಲೈ 14ರ ಮಂಗಳವಾರದಿಂದ ಒಂದು ವಾರ ಕಾಲ ಬೆಂಗಳೂರು ಲಾಕ್‌ಡೌನ್ ಆಗಲಿದೆ. ಮಂಗಳವಾರ ರಾತ್ರಿ 8ಗಂಟೆಯಿಂದ ಲಾಕ್ ಡೌನ್ ಜಾರಿಯಾಗುತ್ತೆ. ಬೆಂಗಳೂರಿನಲ್ಲಿ ಮಿತಿ ಮೀರಿ ಹಬ್ಬುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಇದು ಅನಿವಾರ್ಯವಾಗಿದೆ. ಈ ನಿರ್ಧಾರವನ್ನ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕವೆ ತೆಗೆದುಕೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಆದ್ರೆ ಲಾಕ್ ಡೌನ್ ಸಮಯದಲ್ಲಿ ಅಗತ್ಯ ಸೇವೆಗಳಿಗೆ ಯಾವುದೇ ಅಡೆತಡೆಯಿರುವುದಿಲ್ಲ. ಈ ಮೊದಲೇ ನಿಗದಿಯಾಗಿರುವ ಸ್ನಾತಕೊತ್ತರ ಪರೀಕ್ಷೆಗಳನ್ನು ಯುವುದೇ ಅಡೆತಡೆಯಿಲ್ಲದೆ ನಡೆಸಲಾಗುವುದು. ಲಾಕ್ ಡೌನ್ ವೇಳೆ ಯಾರೂ ಆತಂಕಕ್ಕೊಳಗಾಗುವುದು ಬೇಡ. ಈ ಸಂಬಂಧ ಅಗತ್ಯ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಈ ಅವಧಿಯಲ್ಲಿ ಅಗತ್ಯ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದ್ದು, ವಿವರವಾದ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ಈಗಾಗಲೇ ನಿಗದಿಯಾಗಿರುವಂತೆ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸಲಾಗುವುದು. ಲಾಕ್ ಡೌನ್ ಸಂದರ್ಭದಲ್ಲಿ ಜನರು ಯಾವುದೇ ಆತಂಕಕ್ಕೆ ಒಳಗಾಗದೇ ಸಹಕರಿಸಲು ಕೋರಿದೆ. (2/2)
— B.S. Yediyurappa (@BSYBJP) July 11, 2020
Published On - 9:17 pm, Sat, 11 July 20