ಅನಂತ್ ಅಂಬಾನಿ ಮದುವೆಗೆ ಕುಟುಂಬ ಸಮೇತ ಬಂದ ರಜನಿಕಾಂತ್; ಸಿಕ್ಕಾಪಟ್ಟೆ ಜೋಶ್
ಮುಂಬೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು ಮದುವೆ ಆಗುತ್ತಿದ್ದಾರೆ. ಮುಕೇಶ್ ಅಂಬಾನಿ ಕುಟುಂಬದ ಈ ಅದ್ದೂರಿ ಸಮಾರಂಭಕ್ಕೆ ಗಣ್ಯಾತಿಗಣ್ಯರು ಹಾಜರಿ ಹಾಕಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರು ಕೂಡ ಪತ್ನಿ ಲತಾ, ಮಗಳು ಸೌಂದರ್ಯಾ ಜೊತೆ ಬಂದು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ರಜನಿಕಾಂತ್ ಎಂಟ್ರಿ ನೀಡಿದ ವಿಡಿಯೋ ಇಲ್ಲಿದೆ..
ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ಮುಂಬೈನಲ್ಲಿ ನಡೆಯುತ್ತಿರುವ ಈ ವಿವಾಹಕ್ಕೆ ದೇಶ-ವಿದೇಶದ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆಗುತ್ತಿದ್ದಾರೆ. ಸಿನಿಮಾ ರಂಗದ ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆ. ನಟ ರಜನಿಕಾಂತ್ ಅವರು ಕುಟುಂಬ ಸಮೇತರಾಗಿ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ರಜನಿಕಾಂತ್ ಇದ್ದಲ್ಲಿ ಒಂದು ಜೋಶ್ ಇದ್ದೇ ಇರುತ್ತದೆ. ಮದುವೆಗೆ ಬಂದ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದರು. ರಜನಿಕಾಂತ್ ಎಂಟ್ರಿ ನೀಡುತ್ತಿದ್ದಂತೆಯೇ ಎಲ್ಲರಲ್ಲೂ ಉತ್ಸಾಹ ಹೆಚ್ಚಿತು. ಮೊದಲು ಕುಟುಂಬದವರ ಜೊತೆ ಪೋಸ್ ನೀಡಿದ ರಜನಿಕಾಂತ್ ಅವರು ನಂತರ ಸಿಂಗಲ್ ಆಗಿ ಪೋಸ್ ಕೊಟ್ಟು ಪಾಪರಾಜಿಗಳ ಇಷ್ಟದಂತೆ ನಡೆದುಕೊಂಡರು. ಈ ಮದುವೆಗೆ ವಿಶ್ವ ಪ್ರಸಿದ್ಧ ಸೆಲೆಬ್ರಿಟಿಗಳೆಲ್ಲ ಆಗಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us