ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರ ಮಧ್ಯೆಯೇ ಕಿತ್ತಾಟ
ರಾಶಿಕಾ ಅವರು ಕ್ಯಾಪ್ಟನ್ ಆದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಅನೇಕರಿಗೆ ಅಸಮಾಧಾನ ಇದ್ದಂತೆ ಕಾಣುತ್ತಿದೆ. ಇದರಲ್ಲಿ ಸೂರಜ್ ಕೂಡ ಲಿಸ್ಟ್ ಅಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು. ಈ ಬಗ್ಗೆ ಸೂರಜ್ ಅವರು ಜಗಳ ಆಡಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಮನೆಯಲ್ಲಿ ಗೆಳೆತನ ಹಾಗೂ ದ್ವೇಷ ಯಾವ ಸಂದರ್ಭದಲ್ಲಿ ಬೇಕಿದ್ದರೂ ಹುಟ್ಟಿಕೊಳ್ಳಬಹುದು. ಅದಕ್ಕೆ ಹೊಸ ಉದಾಹರಣೆ ಸೂರಜ್ ಹಾಗೂ ರಾಶಿಕಾ. ಇಬ್ಬರ ಮಧ್ಯೆ ಆಪ್ತತೆ ಬೆಳೆದಿತ್ತು. ಆದರೆ, ರಾಶಿಕಾ ಕ್ಯಾಪ್ಟನ್ ಆಗುತ್ತಿದ್ದಂತೆ ಇಬ್ಬರೂ ಬದಲಾಗಿದ್ದಾರೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ರಾಶಿಕಾ ರಜತ್ ಜೊತೆ ಬೆರೆಯುತ್ತಿರುವುದು ಅವರಿಗೆ ಕೋಪ ತರಿಸಿದೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

