ಬಿಗ್ ಬಾಸ್ ಮನೆಯಲ್ಲಿ ಅಳುತ್ತಾ ಕುಳಿತ ಸ್ಪಂದನಾ: ಸಮಾಧಾನ ಮಾಡಲು ಗಂಡ್ಮಕ್ಕಳ ಡ್ಯಾನ್ಸ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಈಗಾಗಲೇ 65 ದಿನಗಳ ಕಳೆದಿವೆ. ಡಿಸೆಂಬರ್ 3ರ ಸಂಚಿಕೆಯಲ್ಲಿ ಸ್ಪಂದನಾ ಸೋಮಣ್ಣ ಅವರು ಅಳುತ್ತಾ ಕುಳಿತಿದ್ದಾರೆ. ಅವರನ್ನು ಸಮಾಧಾನ ಮಾಡಲು ಧನುಷ್, ಅಭಿಷೇಕ್ ಹಾಗೂ ಸೂರಜ್ ಸಿಂಗ್ ಅವರು ಡ್ಯಾನ್ಸ್ ಮಾಡಿದ್ದಾರೆ. ಪ್ರೋಮೋ ನೋಡಿ..
ಕಿರುತೆರೆ ನಟಿ ಸ್ಪಂದನಾ ಸೋಮಣ್ಣ (Spandana Somanna) ಅವರು ಬಿಗ್ ಬಾಸ್ ಮನೆಯಲ್ಲಿ ಅಳುತ್ತಾ ಕುಳಿತಿದ್ದಾರೆ. ಅವರನ್ನು ಸಮಾಧಾನ ಮಾಡಲು ಧನುಷ್, ಅಭಿಷೇಕ್ ಹಾಗೂ ಸೂರಜ್ ಸಿಂಗ್ (Suraj Singh) ಅವರು ಪ್ರಯತ್ನಿಸಿದ್ದಾರೆ. ಮಾತಿನಲ್ಲಿ ಎಷ್ಟೇ ಸಮಾಧಾನ ಮಾಡಿದರೂ ಸ್ಪಂದನಾ ಅವರು ಅಳು ನಿಲ್ಲಿಸಿಲ್ಲ. ಬಳಿಕ ಅಭಿಷೇಕ್, ಸೂರಜ್ ಸಿಂಗ್ ಮತ್ತು ಧನುಷ್ ಅವರು ಡ್ಯಾನ್ಸ್ ಮಾಡಬೇಕಾಯಿತು. ‘ಜಿಂಕೆ ಮರಿನಾ..’ ಹಾಡಿಗೆ ಈ ಮೂವರು ಹೆಜ್ಜೆ ಹಾಕಿದ್ದಾರೆ. ಅವರ ಡ್ಯಾನ್ಸ್ ನೋಡಿ ಸ್ಪಂದನಾ ಅವರು ನಕ್ಕಿದ್ದಾರೆ. ಡಿಸೆಂಬರ್ 3ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್ಸ್ಟಾರ್ ಒಟಿಟಿ ಮೂಲಕ ಎಪಿಸೋಡ್ ಪ್ರಸಾರ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಶೋನಲ್ಲಿ ಈಗಾಗಲೇ 65 ದಿನಗಳ ಕಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
