ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಂವಿಧಾನಿಕ ಅಧಿಕಾರ ಸುರ್ಜೇವಾಲಾಗಿಲ್ಲ: ರವಿಕುಮಾರ್, ಎಮ್ಮೆಲ್ಸಿ

Updated on: Jul 25, 2025 | 6:02 PM

ಆಳುವ ಪಕ್ಷದ ಜೊತೆ ಸಹಕರಿಸಿ, ಪಕ್ಷದ ನಾಯಕರ ಇಂಗಿತದಂತೆ ಕೆಲಸ ಮಾಡುವಂತೆ ಹೇಳಲು ಸುರ್ಜೇವಾಲಾ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿರಬಹುದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಸಚಿವರೂ ಆಗಿರುವ ರಾಜಣ್ಣ ಅವರಿಗೆ ಸುರ್ಜೇವಾಲಾ ಮಾಡಿದ್ದು ಸರಿಕಂಡಿಲ್ಲವೆಂದರೆ ದೆಹಲಿ ಕಾಂಗ್ರೆಸ್ ನಾಯಕ ಮಾಡಿದ್ದು ಎಷ್ಟು ಅನಪೇಕ್ಷಣೀಯ ಅಂತ ಗೊತ್ತಾಗುತ್ತದೆ ಎಂದು ರವಿಕುಮಾರ್ ಹೇಳಿದರು.

ಬೆಂಗಳೂರು, ಜುಲೈ 25: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಅದ್ಯಾವ ಸಂವಿಧಾನಿಕ ಅರ್ಹತೆ ಮತ್ತು ಅಧಿಕಾರದಿಂದ ರಾಜ್ಯದ ಸರ್ಕಾರೀ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗದರ್ಶನ, ನಿರ್ದೇಶನ ನೀಡಿದರೋ ಗೊತ್ತಿಲ್ಲ, ಅದನ್ನು ಬಿಜೆಪಿ ಖಂಡಿಸುತ್ತದೆ ಎಂದು ಎಂಎಲ್​ಸಿ ಎನ್ ರವಿಕುಮಾರ್ (N Ravi Kumar, MLC) ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಸುರ್ಜೇವಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿಷಯದಲ್ಲಿ ಸಚಿವ ಕೆಎನ್ ರಾಜಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದೆ, ಸುರ್ಜೇವಾಲಾ ತಮ್ಮ ಪಕ್ಷದ ಮಂತ್ರಿ ಮತ್ತು ಶಾಸಕರೊಂದಿಗೆ ಸಭೆ ನಡೆಸಲು ಮುಕ್ತರು, ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗುತ್ತದೆ, ಅದರೆ ಅಧಿಕಾರಿಗಳ ಮೇಲೆ ಅವರಿಗೆ ಯಾವ ಅಧಿಕಾರವೂ ಇಲ್ಲ ಎಂದು ರವಿಕುಮಾರ್ ಹೇಳಿದರು.

ಇದನ್ನೂ ಓದಿ:  ಸುರ್ಜೇವಾಲಾ ಬೆಂಗಳೂರಲ್ಲಿದ್ದ ಸಮಯ ಒಬ್ಬೇಒಬ್ಬ ಅಧಿಕಾರಿಯನ್ನು ಭೇಟಿಯಾಗಲಿಲ್ಲ: ಚಲುವರಾಯಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ