ಗುಂಡಿ ಖಾಲಿ ಮಾಡಿದ್ರೂ ಮತ್ತೆ-ಮತ್ತೆ ತುಂಬಿಕೊಳ್ಳುತ್ತಿರುವ ನೀರು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿ.ಮಲ್ಲೇನಹಳ್ಳಿಯಲ್ಲಿ 4 ಅಡಿ ಆಳ ಗುಂಡಿ ತೆಗೆದಾಗ ನೀರು ಸಿಕ್ಕಿದೆ. ಯೋಗೇಶ್ ಎಂಬುವರ ತೋಟದಲ್ಲಿ 4 ಅಡಿಗೆ ನೀರು ಸಿಕ್ಕಿದೆ. ಆ ಮೂಲಕ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಕಡೂರು ತಾಲೂಕಿನಲ್ಲಿ ವಿಸ್ಮಯ ನಡೆದಿದೆ.
ಚಿಕ್ಕಮಗಳೂರು, ಏಪ್ರಿಲ್ 08: ಜಿಲ್ಲೆಯ ಕಡೂರು ತಾಲೂಕಿನ ಬಿ.ಮಲ್ಲೇನಹಳ್ಳಿಯಲ್ಲಿ 4 ಅಡಿ ಆಳ ಗುಂಡಿ ತೆಗೆದಾಗ ನೀರು (WATER) ಸಿಕ್ಕಿದೆ. ಯೋಗೇಶ್ ಎಂಬುವರ ತೋಟದಲ್ಲಿ 4 ಅಡಿಗೆ ನೀರು ಸಿಕ್ಕಿದೆ. ಆ ಮೂಲಕ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಕಡೂರು ತಾಲೂಕಿನಲ್ಲಿ ವಿಸ್ಮಯ ನಡೆದಿದೆ. 1 ಸಾವಿರ ಅಡಿ ಬೋರ್ ಕೊರೆದರೂ ನೀರು ಸಿಗದೆ ಜನರು ಪರದಾಡುವಂತಾಗಿತ್ತು. ಕೇವಲ 4 ಅಡಿ ಗುಂಡಿ ತೆಗೆದಾಗ ನೀರು ಸಿಕ್ಕಿದ್ದರಿಂದ ತೀವ್ರ ಕುತೂಹಲ ಕೆರಳಿಸಿದೆ. ಗುಂಡಿ ಖಾಲಿ ಮಾಡಿದರೆ ಮತ್ತೆ ಮತ್ತೆ ನೀರು ತುಂಬಿಕೊಳ್ಳುತ್ತಿದೆ. ಗುಂಡಿ ನೀರನ್ನು ಬಳಸಿ ರೈತ ಯೋಗೇಶ್ ಬೆಳೆ ಉಳಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Apr 08, 2024 05:16 PM