ನಕಲಿ ಅಪ್ಪ-ಅಮ್ಮನನ್ನು ಸೃಷ್ಟಿಸಿ ಕೀನ್ಯಾದ ಮಹಿಳಾ ಅಧಿಕಾರಿಯನ್ನೇ ಮದುವೆಯಾಗಿದ್ದ ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಆರೋಪಿ

Updated By: ಮಾಲಾಶ್ರೀ ಅಂಚನ್​

Updated on: Sep 25, 2025 | 1:36 PM

ಮಂಗಳೂರು ಕುಕ್ಕರ್‌ ಬಾಂಬ್‌, ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಎನ್‌.ಐ.ಎ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಇದರಲ್ಲಿ ಶಂಕಿತ ಉಗ್ರ ಅರಾಫತ್‌ ಅಲಿ ರೋಚಕ ಕಹಾನಿ ಬೆಳಕಿಗೆ ಬಂದಿದೆ. ಬಾಂಬ್‌ ಬ್ಲಾಸ್ಟ್‌ ಬಳಿಕ ಆತ ಕೀನ್ಯಾ ದೇಶದ ನಾಗರಿಕನಾಗಲು ನಕಲಿ ಅಪ್ಪ ಅಮ್ಮನನ್ನು ಸೃಷ್ಟಿಸಿ ಅಲ್ಲಿನ ಮಹಿಳಾ ಅಧಿಕಾರಿಯನ್ನೇ ಮದುವೆಯಾಗಿದ್ದ. ಉಗ್ರನನ್ನು ಮದುವೆಯಾಗಿದ್ದೇನೆ ಎಂಬುದನ್ನು ತಿಳಿದ ಪತ್ನಿ ಶಾಕ್‌ ಆಗಿದ್ದು, ತನ್ನ ಮದುವೆಯನ್ನು ಅಸಿಂಧುಗೊಳಿಸಲು ಕೀನ್ಯಾ ಸರ್ಕಾರಕ್ಕೆ ಪತ್ರ ಬರೆದಿದ್ದಾಳೆ.

ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಮತ್ತು ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಕೇಸ್‌ಗೆ ಸಂಬಂಧಪಟ್ಟಂತೆ ಎನ್‌.ಐ.ಎ (NIA) ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಇದರಲ್ಲಿ ಶಂಕಿತ ಉಗ್ರ ಅರಾಫತ್‌ ಅಲಿಯ ರೋಚಕ ಕಹಾನಿ ಬೆಳಕಿಗೆ ಬಂದಿದೆ. ಬಾಂಬ್‌ ಬ್ಲಾಸ್ಟ್‌ ಬಳಿಕ ಆತ ಕೀನ್ಯಾ ದೇಶದ ನಾಗರಿಕನಾಗಲು ನಕಲಿ ಅಪ್ಪ ಅಮ್ಮನನ್ನು ಸೃಷ್ಟಿಸಿ ಅಲ್ಲಿನ ಮಹಿಳಾ ಅಧಿಕಾರಿಯನ್ನೇ ಮದುವೆಯಾಗಿದ್ದನು. ಎನ್‌ಐಎ ದಾಖಲೆ ಸಮೇತ ಕೀನ್ಯಾ ಸರ್ಕಾರವನ್ನು ಸಂಪರ್ಕಿಸಿ ಉಗ್ರನ ಹಸ್ತಾಂತರಕ್ಕೆ ಮನವಿ ಮಾಡಿತ್ತು. 2023 ರಲ್ಲಿ ದೆಹಲಿ ಏರ್‌ಪೋರ್ಟ್‌ನಲ್ಲಿ ಅರಾಫತ್‌ನನ್ನು ಬಂಧಿಸಲಾಗಿತ್ತು. ಉಗ್ರನನ್ನು ಮದುವೆಯಾಗಿರೋದನ್ನು ತಿಳಿದು ಪತ್ನಿ ಶಾಕ್‌ ಆಗಿದ್ದು, ತನ್ನ ಮದುವೆಯನ್ನು ಅಸಿಂಧುಗೊಳಿಸಲು ಕೀನ್ಯಾ ಸರ್ಕಾರಕ್ಕೆ ಪತ್ರ ಬರೆದಿದ್ದಾಳೆ. ಅಲ್ಲದೆ ಕೀನ್ಯಾದ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ. ಅರಾಫರ್‌ ಅಲಿಯ ನಕಲಿ ತಂದೆತಾಯಿ ವಿರುದ್ಧವೂ ದೂರು ದಾಖಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ