ಕ್ರಿಕೆಟ್ ಕೋಚ್ನ ಮತ್ತಷ್ಟು ಕಾಮ ಪುರಾಣ ಬಟಾಬಯಲು, ಸ್ಫೋಟಕ ಅಂಶ ಬಿಚ್ಚಿಟ್ಟ ಸಂತ್ರಸ್ತೆ
ರಾಜ್ಯದಲ್ಲಿ ‘ಪ್ರಜ್ವಲ್ ರೇವಣ್ಣ ಮಾದರಿ’ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕ ಮ್ಯಾಥ್ಯೂ ಎನ್ನುವಾತನ ಮದ್ವೆಯಾಗುವುದಾಗಿ ಮಹಿಳೆಯೊಬ್ಬರಿಗೆ ಮೋಸ ಮಾಡಿದ್ದಾನೆ. ಮದುವೆ ಮಾಡಿಕೊಳ್ಳುತ್ತೇನೆಂದು ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಇದೀಗ ಮಹಿಳೆ ಗರ್ಭಿಣಿಯಾಗಿದ್ದು, ನಾನು ಕ್ರಿಶ್ಚಿಯನ್ ನೀನು ಹಿಂದೂ ಮದುವೆಯಾಗಲ್ಲ ಎಂದು ಹೇಳಿ ಕೈಕೊಟ್ಟಿದ್ದಾನೆ.
ಬೆಂಗಳೂರು, (ಸೆಪ್ಟೆಂಬರ್ 25): ರಾಜ್ಯದಲ್ಲಿ ‘ಪ್ರಜ್ವಲ್ ರೇವಣ್ಣ ಮಾದರಿ’ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕ ಮ್ಯಾಥ್ಯೂ ಎನ್ನುವಾತನ ಮದ್ವೆಯಾಗುವುದಾಗಿ ಮಹಿಳೆಯೊಬ್ಬರಿಗೆ ಮೋಸ ಮಾಡಿದ್ದಾನೆ. ಮದುವೆ ಮಾಡಿಕೊಳ್ಳುತ್ತೇನೆಂದು ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಇದೀಗ ಮಹಿಳೆ ಗರ್ಭಿಣಿಯಾಗಿದ್ದು, ನಾನು ಕ್ರಿಶ್ಚಿಯನ್ ನೀನು ಹಿಂದೂ ಮದುವೆಯಾಗಲ್ಲ ಎಂದು ಹೇಳಿ ಕೈಕೊಟ್ಟಿದ್ದಾನೆ. ಸಂಬಂಧ ಸಂತ್ರಸ್ತೆ ಮಹಿಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಗಂಭೀರ ಆರೋಪ ಮಾಡಿದ್ದಾಳೆ. ನನ್ನನ್ನ ದೈಹಿಕವಾಗಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅಲ್ಲದೇ ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಸೆರೆ ಹಿಡಿದುಕೊಂಡಿದ್ದಾನೆ. ಆತನ ಬಳಿ ಸುಮಾರು 200 ವಿಡಿಯೋಗಳಿವೆ ಎಂದು ಸಂತ್ರಸ್ತೆ ಸ್ಫೋಟಕ ಆರೋಪ ಮಾಡಿದ್ದಾಳೆ.

