AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಲೊರೊ ವಾಹನದಲ್ಲಿ ಗ್ಯಾಂಗ್​​ ಅನುಮಾನಾಸ್ಪದ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್​?

ಬೊಲೊರೊ ವಾಹನದಲ್ಲಿ ಗ್ಯಾಂಗ್​​ ಅನುಮಾನಾಸ್ಪದ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್​?

ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Apr 02, 2026 | 1:45 PM

Share

ಬೆಂಗಳೂರಿನ ಬನಶಂಕರಿಯಲ್ಲಿ ಆಶೀರ್ವಾದ ಮಾಡುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಪುಸಲಾಯಿಸುತ್ತಿದ್ದ ಅನುಮಾನಾಸ್ಪದ ಗ್ಯಾಂಗ್‌ನ ವಿಡಿಯೋ ವೈರಲ್ ಆಗಿದೆ. ಬಾಲಕಿಯೊಬ್ಬಳನ್ನು ಸಂಪರ್ಕಿಸಲು ಯತ್ನಿಸಿದ ಈ ತಂಡ, ಮನೆಯವರು ಬರುತ್ತಿದ್ದಂತೆ ಬೊಲೆರೊ ವಾಹನದಲ್ಲಿ ಪರಾರಿಯಾಗಿದೆ. ಘಟನೆ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಪೊಲೀಸರು ವಿಡಿಯೋ ಸಂಬಂಧ ಪರಿಶೀಲನೆಗೆ ಮುಂದಾಗಿದ್ದಾರೆ.

ಬೆಂಗಳೂರು, ಏಪ್ರಿಲ್​​ 02: ನಗರದ ಬನಶಂಕರಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬೊಲೆರೊ ವಾಹನದಲ್ಲಿ ಓಡಾಟ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಶೀರ್ವಾದ ಮಾಡುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಗ್ಯಾಂಗ್​​ ಕರೆಯುತ್ತಿದೆ ಎಂದು ದೂರಲಾಗಿದೆ. ರಸ್ತೆಯಲ್ಲಿ ತೆರಳುತ್ತಿರುವ ಬೊಲೆರೋ ವಾಹನ ಮನೆಯೊಂದರ ಗೇಟ್​​ ಬಳಿ ಶಾಲಾ ಬಾಲಕಿ ಕಾಣುತ್ತಿದ್ದಂತೆ ನಿಂತಿದೆ. ಬಳಿಕ ಹಿಮ್ಮುಖವಾಗಿ ಹೋಗಿ ಬಾಲಕಿ ಬಳಿ ವಾಹನದಲ್ಲಿದ್ದವರು ಮಾತನಾಡಿದ್ದಾರೆ. ಈ ವೇಳೆ ಆಕೆ ಮನೆಯವರನ್ನು ಕರೆದಿದ್ದು, ಅವರು ವಿಚಾರಿಸುತ್ತಿದ್ದಂತೆ ವಾಹನ ಸಮೇತ ಗ್ಯಾಂಗ್​​ ಸ್ಥಳದಿಂದ ಕಾಲ್ಕಿತ್ತಿದೆ. ವೈರಲ್​​ ವಿಡಿಯೋ ಬಗ್ಗೆ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ಈ ಸಂಬಂಧ ಇಲ್ಲಿಯವರೆಗೂ ಯಾವುದೇ ಕೇಸ್​​ ದಾಖಲಾಗಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More