ಮಲೆನಾಡಿನಲ್ಲಿ ಸ್ವದೇಶಿ ಮೇಳದ ಕಲರವ; ಸ್ವದೇಶಿ ವಸ್ತುಗಳ ಬಳಕೆ ಮತ್ತು ಗ್ರಾಮೀಣ ಬದುಕಿನ ಸೊಗಡಿನ ಪ್ರದರ್ಶನ

ಮಲೆನಾಡಿನಲ್ಲಿ ಸ್ವದೇಶಿ ಮೇಳದ ಕಲರವ; ಸ್ವದೇಶಿ ವಸ್ತುಗಳ ಬಳಕೆ ಮತ್ತು ಗ್ರಾಮೀಣ ಬದುಕಿನ ಸೊಗಡಿನ ಪ್ರದರ್ಶನ

Basavaraj Yaraganavi
| Updated By: ಆಯೇಷಾ ಬಾನು

Updated on: Dec 11, 2023 | 2:33 PM

ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ವಸ್ತುಗಳ ಬಳಕೆ ಮತ್ತು ಗ್ರಾಮೀಣ ಬದುಕಿನ ಸೊಗಡಿನ ಅನಾವರಣವಾಗಿದೆ. ಲಕ್ಷ ಲಕ್ಷ ಜನರು ಕಳೆದ ನಾಲ್ಕು ದಿನಗಳಿಂದ ಸ್ವದೇಶಿ ಮೇಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ. ಮಲೆನಾಡಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಸ್ವದೇಶಿ ಮೇಳಕ್ಕೆ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ.

ಶಿವಮೊಗ್ಗ, ಡಿ.11: ನಗರದ ಫ್ರೀಡಂ ಪಾರ್ಕ್​ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಸ್ವದೇಶಿ ಮೇಳ ನಡೆಯುತ್ತಿದೆ. ಮೇಳಕ್ಕೆ ಎಂಟ್ರಿ ಕೊಡುತ್ತಿದ್ದಂತೆ ವಿಶಾಲವಾದ ರಂಗೋಲಿಯು ಎಲ್ಲರನ್ನು ಸ್ವಾಗತಿಸುತ್ತದೆ. ಅದರ ಬಳಿಕ ಮಲೆನಾಡಿನ ಗೀಡ್ ಎನ್ನುವ ಹಸುವಿನ ತಳಿಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯುತ್ತಿದೆ. ಇದರ ನಂತರ ಹಳ್ಳಿ ಸೊಗಡಿನ ಹಳೆಯ ಗುಡಿಸಲು ಮತ್ತು ಮನೆಗಳನ್ನು ಸೃಷ್ಟಿಸಲಾಗಿದೆ. ಎಲ್ಲರೂ ಅವುಗಳ ಮುಂದೆ ನಿಂತು ಸೆಲ್ಫಿ ಮತ್ತು ಫೋಟೋ ಕ್ಲಿಕ್ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಬಳಿಕ ಒಳಗೆ ಹೋಗುತ್ತಿದ್ದಂತೆ ಸುಮಾರು 250ಕ್ಕೂ ಹೆಚ್ಚು ಮಳಿಗೆಗಳು. ಎಲ್ಲ ಮಳಿಗೆಯಲ್ಲೂ ಸ್ವದೇಶಿ ಉತ್ಪನಗಳ ಪ್ರದರ್ಶನ ಮತ್ತು ಮಾರಾಟವಾಗುತ್ತಿದೆ.

ವಿದೇಶ ವಸ್ತುಗಳಿಗಿಂತ ಸ್ವದೇಶಿ ವಸ್ತುಗಳ ಬಳಕೆ ಮತ್ತು ಪ್ರಯೋಜನ, ಲಾಭದ ಮಹತ್ವವು ಈ ಮೇಳದಲ್ಲಿ ಪ್ರಮುಖ ಸಂದೇಶವಾಗಿದೆ. ಸಣ್ಣಪುಟ್ಟ ವಸ್ತುವಿನಿಂದ ಹಿಡಿದು ದೊಡ್ಡ ದೊಡ್ಡ ವಸ್ತುಗಳ ಪ್ರದರ್ಶನವಿದೆ. ರೈತರು ಮತ್ತು ಮಹಿಳೆಯರು, ಯುವತಿಯರಿಗಾಗಿ ಬಟ್ಟೆ,ಗೃಹ ಬಳಕೆ ವಸ್ತುಗಳು, ಸಿರಿಧಾನ್ಯ, ಸಾವಯವ ರಸಗೊಬ್ಬರ, ಭತ್ತ, ರಾಗಿ ಅಡಿಕೆ ಸೇರಿದಂತೆ ವಿವಿಧ ಹೊಸ ಹೊಸ ತಳಿಗಳ ಕುರಿತು ಸಮಗ್ರ ಮಾಹಿತಿಗಳಿಂದ ಕೂಡಿರುವ ವಿವಿಧ ಮಳಿಗೆಗಳನ್ನಿ ಇಲ್ಲಿ ಕಾಣಬಹುದು. ಮಹಿಳೆಯರು ಮತ್ತು ಯುವತಿಯರು ಖುಷಿ ಖುಷಿಯಾಗಿ ಸ್ವದೇಶಿ ವಸ್ತುಗಳ ಉತ್ಪನ್ನಗಳನ್ನು ನೋಡಿ ಬೆರಗಾದ್ರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ