ಕಲಬುರಗಿಯ ಹೈಸ್ಕೂಲ್ ವಿದ್ಯಾರ್ಥಿ ಸೈಯದ್ ರಫಿ ಸ್ವೀಡನ್ಗೆ ಹೊರಟು ನಿಂತಿದ್ದಾನೆ, ಆತನ ಸಾಧನೆ ತಿಳಿದರೆ ನೀವು ಭಲೆ ಎನ್ನುತ್ತೀರಿ!
ಹುಸೇನ್ ತನ್ನ ಆಟದಿಂದ ಇದೀಗ ಕಲಬುರಗಿ ಮಾತ್ರವಲ್ಲಾ, ರಾಜ್ಯದ ಜನರೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಹೌದು ಇದೇ ಜುಲೈ 16 ರಂದು ಸ್ವೀಡನ್ ನಲ್ಲಿ ಆರಂಭವಾಗಲಿರೋ ಗೋಥಿಯಾ ವರ್ಲ್ಡ್ ಯೂತ್ ಕಪ್ ಪುಟ್ಬಾಲ್ ಟೂರ್ನಿಗೆ ಸೆಲೆಕ್ಟ್ ಆಗಿದ್ದಾನೆ.
ಭಾರತದಲ್ಲಿ ಫುಟ್ಬಾಲ್ ಅಂದ್ರೆ ಬಹುತೇಕರಿಗೆ ಅಷ್ಟಕಷ್ಟೇ. ಕ್ರಿಕೆಟ್ ಗೆ ಇರೋ ಡಿಮ್ಯಾಂಡ್ ಫುಟ್ಬಾಲ್ ಗೆ ಇಲ್ಲಾ. ಆದ್ರೆ ಕಲಬುರಗಿ ಬಾಲಕನೋರ್ವ ಇದೀಗ ಅಂತರಾಷ್ಟ್ರೀಯ ಫುಟ್ಬಾಲ್ ಟೂರ್ನಿಗೆ ಆಯ್ಕೆಯಾಗಿದ್ದಾನೆ. ವಿಶೇಷವೆಂದ್ರೆ, ರಾಜ್ಯದಿಂದ ಆಯ್ಕೆಯಾದ ಏಕೈಕ ಆಟಗಾರ ಅನ್ನೋ ಕೀರ್ತಿ ಆ ಬಾಲಕನಿಗೆ ಬಂದಿದೆ. ಹೌದು ಕಲಬುರಗಿಯಂತಹ ಹಿಂದುಳಿದ ಪ್ರದೇಶದಲ್ಲಿನ ಬಾಲಕನೋರ್ವ ಅಂತರಾಷ್ಟ್ರೀಯ ( Sweden) ಗೋಥಿಯಾ ಯೂತ್ ವರ್ಲ್ಡ್ ಕಪ್ ಟೂರ್ನಮೆಂಟ್ ಗೆ (U-13 Gothia World Youth Football Tournament 2023) ಆಯ್ಕೆಯಾಗಿದ್ದಾನೆ. ಈ ಕಡೆ ಫುಟ್ಬಾಲ್ ಆಟದಲ್ಲಿ ನಿರತನಾಗಿರುವ ಬಾಲಕ. ಮತ್ತೊಂದಡೆ ಆತನಿಗೆ ಉತ್ತಮ ತರಬೇತಿ ನೀಡ್ತಿರುವ ಕೋಚ್. ಕೋಚ್ ಹೇಳಿದ್ದನ್ನು ಲಕ್ಷ್ಯವಿಟ್ಟು ಕೇಳಿಕೊಂಡು, ಅದನ್ನು ಪಾಲಿಸುತ್ತಿದ್ದರೆ, ಮತ್ತೊಂದಡೆ ಎದುರಾಳಿ ಆಟಗಾರರಿಗೆ ಯಾಮಾರಿಸಿ, ಗೋಲ್ ಬಾರಿಸುವ ಚಾಕಚಕ್ಯೆತೆ ಹೊಂದಿರುವ ಈ ಬಾಲಕನ ಹೆಸರು ಸೈಯದ್ ರಫಿ ಹುಸೇನ್ (Syed Rafi Husain) ಅಂತ. ಕಲಬುರಗಿ ನಗರದ (Kalaburagi) ಹುಸೇನ್ ಗಾರ್ಡನ್ ನಿವಾಸಿಯಾಗಿರುವ ಹುಸೇನ್, ಕಲಬುರಗಿ ನಗರದ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾನೆ.
ಹುಸೇನ್ ತನ್ನ ಆಟದಿಂದ ಇದೀಗ ಕಲಬುರಗಿ ಮಾತ್ರವಲ್ಲಾ, ರಾಜ್ಯದ ಜನರೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಹೌದು ಇದೇ ಜುಲೈ 16 ರಂದು ಸ್ವೀಡನ್ ನಲ್ಲಿ ಆರಂಭವಾಗಲಿರೋ ಗೋಥಿಯಾ ವರ್ಲ್ಡ್ ಯೂತ್ ಕಪ್ ಪುಟ್ಬಾಲ್ ಟೂರ್ನಿಗೆ ಸೆಲೆಕ್ಟ್ ಆಗಿದ್ದಾನೆ. ದೇಶದ ವಿವಿಧ ರಾಜ್ಯಗಳಿಂದ ಒಟ್ಟು 17 ಬಾಲಕರು ಆಯ್ಕೆಯಾಗಿದ್ದು, ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ ಅನ್ನೋ ಕೀರ್ತಿಗೆ ಹುಸೇನ್ ಪಾತ್ರನಾಗಿದ್ದಾನೆ.
ಇನ್ನು ಸ್ವೀಡನ್ ನಲ್ಲಿ ನಡೆಯಲಿರುವ ಗೋಥಿಯಾ ವರ್ಲ್ಡ್ ಯೂತ್ ಕಪ್ ಫುಟ್ಬಾಲ್ ಗೆ ಕೆಲ ದಿನಗಳ ಹಿಂದೆ ಮುಂಬೈ ನಲ್ಲಿ ಆಯ್ಕೆಗಾರರ ಟ್ರೈಯಲ್ ನಡೆದಿತ್ತು. ಆಸ್ಕರ್ ಫೌಂಡೇಶನ್ ಮತ್ತು ಎಸ್ ಕೆ ಎಫ್ ವತಿಯಿಂದ ಮುಂಬೈ ಮತ್ತು ಪುಣೆಯಲ್ಲಿ ಆಯ್ಕೆಗಾರರ ಟ್ರಯಲ್ ನಡೆಸಲಾಗಿತ್ತು. ಟ್ರಯಲ್ ನಲ್ಲಿ ಭಾಗಿಯಾಗಿದ್ದ ಹುಸೇನ್ ಉತ್ತಮ ಪ್ರದರ್ಶನ ತೋರಿಸಿದ್ದ.
ಹುಸೇನ್ ಆಟವನ್ನು ನೋಡಿದ್ದ ಆಯ್ಕೆಗಾರರು, ಅಂತರರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆತನನ್ನು ಆಯ್ಕೆ ಮಾಡಿದ್ದಾರೆ. ಜುಲೈ 16 ರಂದು ಸ್ವೀಡನ್ ನಲ್ಲಿ ನಡೆಯಲಿರೋ ಟೂರ್ನಮೆಂಟ್ ಗೆ ಆಯ್ಕೆಯಾಗಿದ್ದರಿಂದ, ಹುಸೇನ್ ವೀಸಾ ಕೂಡಾ ಬಂದಿದ್ದು, ಈ ತಿಂಗಳ ಅಂತ್ಯದಲ್ಲಿ ಸ್ವೀಡನ್ ಗೆ ಪ್ರಯಾಣ ಬೆಳಸಲಿದ್ದಾನಂತೆ.
ಇನ್ನು ಕಲಬುರಗಿಯಲ್ಲಿ ಫುಟ್ಬಾಲ್ ಬಗ್ಗೆ ಕ್ರೇಜ್ ಇರಲಿಲ್ಲ. ಆದ್ರೆ ಈ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಯಡಾ ಮಾರ್ಟಿನ್ ಅವರು ಕಲಬುರಗಿಯಲ್ಲಿ ಪುಟ್ಬಾಲ್ ಅಸೋಶಿಯಷನ್ ಆರಂಭಿಸಿದ್ದರು. ಮುಂಬೈನಿಂದ ಬಂದಿರೋ ಮುಖ್ಯ ಕೋಚ್ ಆಗಿರುವ ಫರ್ಹಾನ್ ಶಾದ್ ನೇತೃತ್ವದಲ್ಲಿ ಇದೀಗ ಕಲಬುರಗಿ ನಗರದಲ್ಲಿ ನೂರಾರು ಮಕ್ಕಳು ಫುಟ್ಬಾಲ್ ಕಲಿಯುತ್ತಿದ್ದಾರೆ. ಇನ್ನು ಅಂತರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಿರುವ ಹುಸೇನ್ ಅವರ ತಂದೆ ಎಲೆಕ್ಟ್ರಾನಿಕ್ ಅಂಗಡಿಯನ್ನು ಹೊಂದಿದ್ದಾರಂತೆ. ಕಳೆದ ಎರಡು ವರ್ಷಗಳಿಂದ ಹುಸೇನ್ ಫುಟ್ಬಾಲ್ ಬಗ್ಗೆ ಪ್ರೀತಿ ಮೂಡಿಸಿಕೊಂಡಿದ್ದನಂತೆ. ಅಂದಿನಿಂದ ನಿರಂತರವಾಗಿ ಪ್ರತಿನಿತ್ಯ ಶಾಲೆಗೆ ಹೋಗಿ ಬಂದ ಮೇಲೆ ತರಬೇತಿ ಪಡೆಯುತ್ತಿರುವ ಹುಸೇನ್, ಪ್ರತಿದಿನ ಎರಡು ಗಂಟೆಗೂ ಹೆಚ್ಚು ಕಾಲ ಗ್ರೌಂಡ್ ನಲ್ಲಿ ಬೆವರು ಸುರಿಸುತ್ತಿದ್ದಾನಂತೆ.
ಕಲಬುರಗಿಯ ಬಾಲ ಪ್ರತಿಭೆ ಇದೀಗ ಅಂತರಾಷ್ಟ್ರೀಯ ಫುಟ್ಬಾಲ್ ಟೂರ್ನಿಗೆ ಆಯ್ಕೆಯಾಗಿರುವುದು ಕಲಬುರಗಿ ಜನರ ಸಂತಸ ಇಮ್ಮಡಿಯಾಗುವಂತೆ ಮಾಡಿದೆ. ಕಲಬುರಗಿಯಲ್ಲಿ ಫುಟ್ಬಾಲ್ ಆಟಕ್ಕೆ ಹೇಳಿಕೊಳ್ಳುವಂತಹ ಸೌಲಭ್ಯಗಳು ಇಲ್ಲ. ಆದ್ರೆ ಇರುವ ಸೌಲಭ್ಯದಲ್ಲಿಯೇ ಕಠಿಣ ಶ್ರಮವಹಿಸಿರೋ ಬಾಲಕ, ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದಾನೆ.