T20 World Cup: ಅದೆಷ್ಟೋ ವರ್ಷಗಳಿಂದ ಆದಿಮಿಟ್ಟುಕೊಂಡಿದ್ದ ಅಗ್ರೆಸಿವ್ ಫಸ್ಟ್ ಟೈಮ್ ಹೊರಹಾಕಿದ ದ್ರಾವಿಡ್, ವಿಡಿಯೋ ನೋಡಿ
ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದೆ. ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ಗೆ ಮುತ್ತಿಕ್ಕಿದೆ. ಭಾರತ ತಂಡ ವಿಶ್ವ ಚಾಂಪಿಯನ್ ಆಗುತ್ತಿದ್ದಂತೆ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಕುಣಿದು ಕುಪ್ಪಳಿಸಿದ ವಿಡಿಯೋ ಇಲ್ಲಿದೆ.
ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದೆ. ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ಗೆ ಮುತ್ತಿಕ್ಕಿದೆ. ಭಾರತ ತಂಡದ ಗೆಲುವಿಗೆ ಎಲ್ಲಡೆ ಸಂಭ್ರಮಾಚರಣೆ ನಡೆಯುತ್ತಿದೆ. ಭಾರತ ತಂಡ ವಿಶ್ವ ಚಾಂಪಿಯನ್ ಆಗುತ್ತಿದ್ದಂತೆ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಕುಣಿದು ಕುಪ್ಪಳಿಸಿದರು. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಅಂದು ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಕಣ್ಣೀರು ಹಾಕಿದ್ದರು. ಇದೀಗ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ತನ್ನ ಬ್ಲೂ ಬಾಯ್ಸ್ ಜೊತೆ ವಿಶ್ವ ಕಪ್ಪ ಎತ್ತಿ ಕುಣಿದು ಸಂಭ್ರಮಿಸಿದರು.
ತನ್ನ ಹುಡುಗರು ಕಪ್ ಹಿಡಿದು ಸಂಭ್ರಮಿಸುತ್ತಿದ್ದರು. ಈ ಸಂಭ್ರಮಾಚರಣೆಯನ್ನು ರಾಹುಲ್ ದ್ರಾವಿಡ್ ನೋಡುತ್ತ ನಿಂತಿದ್ದರು. ಈ ವೇಳೆ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೋಹ್ಲಿ ವಿಶ್ವಕಪ್ ಅನ್ನು ರಾಹುಲ್ ದ್ರಾವಿಡ್ ಅವರ ಕೈಗೆ ನೀಡಿದರು. ಆಗ ಭಾರತ ಕ್ರಿಕೆಟ್ ತಂಡದ ವಾಲ್ ರಾಹುಲ್ ದ್ರಾವಿಡ್ ಕಪ್ ಎತ್ತಿಹಿಡಿದು ಸಂಭ್ರಮದ ಕೇಕೆ ಹಾಕಿದರು. ಈ ವೇಳೆ ಟೀಮ್ ಇಂಡಿಯಾ ಆಟಗಾರರು ಸಹಿತ ಸಂಭ್ರಮಿಸಿದರು.
Published on: Jun 30, 2024 08:57 AM
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
