ಸ್ಕ್ರೂ ಡ್ರೈವರ್ ಮತ್ತು ಸ್ಪ್ಯಾನರ್ ಹಿಡಿದು ಮೂರ್ಖ ತಾಲಿಬಾನಿಗಳು ಹೆಲಿಕಾಪ್ಟರ್​ಗಳ ರಿಪೇರಿಗಿಳಿದ ಪ್ರಸಂಗ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 02, 2021 | 9:42 PM

ಮನೆಯಲ್ಲಿ ಮಕ್ಳಳು ಓಡಿಸುವ ಸೈಕಲ್ ಮತ್ತು ಹೆಲಿಕಾಪ್ಟರ್ ಗಳ ನಡುವೆ ಏನೂ ವ್ಯತ್ಯಾವಿರದು ಅಂತ ತಾಲಿಬಾನಿಗಳು ಭಾವಿಸಿದಂತಿದೆ. ಆಟಿಕೆ ವಸ್ತುಗಳನ್ನು ರಿಪೇರಿ ಮಾಡಲು ಪರಿಣಿತಿ ಬೇಕಾಗುತ್ತದೆ, ಮನೆಯಲ್ಲಿ ಟ್ಯಾಪ್ ಹಾಳಾದರೆ ಅದನ್ನು ದುರಸ್ತಿ ಮಾಡಲು ಪ್ಲಂಬರ್ ಬೇಕು.

ಅಮೆರಿಕಾದವರು ಅಫ್ಘಾನಿಸ್ತಾನ ತ್ಯಜಿಸುವ ಮೊದಲು ಹೆಲಿಕಾಪ್ಟರ್, ಯುದ್ಧ ವಿಮಾನ ಬಿಟ್ಟು ಹೋಗಿದ್ದು, ಅವುಗಳನ್ನು ನೋಡಿ ತಮ್ಮಲ್ಲೂ ಅತ್ಯಾಧುನಿಕ ಮಿಲಿಟರಿ ಉಪಕಣಗಳಿವೆ ಅಂತ ತಾಲಿಬಾನಿಗಳು ಬೀಗಿದ್ದು, ನಂತರ ಅಮೆರಿಕನ್ನರು ಹೊರಡುವ ಮೊದಲು ಹೆಲಿಕಾಪ್ಟರ್ ಮತ್ತು ಯುದ್ಧ ವಿಮಾನಗಳನ್ನು ನಿಷ್ಕ್ರಿಯಗೊಳಿಸಿದ್ದಾರೆಂದು ಗೊತ್ತಾಗಿ ಹಿಡಿಶಾಪ ಹಾಕಿದ್ದು-ಎಲ್ಲ ವಿಷಯಗಳು ನಿಮಗೆ ಗೊತ್ತಿವೆ. ಪ್ರತಿದಿನ ನಾವು ಈ ಸಂಗತಿಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಹೆಲಿಕಾಪ್ಟರ್-ಯುದ್ಧವಿಮಾನ-ತಾಲಿಬಾನ್ಗೆ ಸಂಬಂಧಿಸಿದ ಒಂದು ಮನರಂಜನಾತ್ಮಕ, ಹಾಸ್ಯಭರಿತ ಸಂಗತಿಯನ್ನು ನಾವು ನಿಮಗೆ ಹೇಳಲೇಬೇಕು.

ವಿಷಯ ಏನೆಂದರೆ, ದುರಸ್ತಿ ಮಾಡಲಾರದಷ್ಟು ಮಟ್ಟಿಗೆ ವಿಮಾನಗಳನ್ನು ಅಮೆರಿಕನ್ನರು ಹಾಳು ಮಾಡಿದ್ದಾರೆ ಅಥವಾ ನಿಷ್ಕ್ರಿಯಗೊಳಿಸಿದ್ದ್ದಾರೆ. ಪರಿಣಿತರೇ ರಿಪೇರಿ ಮಾಡದ ಹಾಗೆ ಅವುಗಳನ್ನು ಹಾಳು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಿಡಂಬನೆ ಏನು ಗೊತ್ತಾ? ತಮ್ಮ ಬದುಕಿನಲ್ಲಿ ಬಂದೂಕು ಬಿಟ್ಟು ಬೇರೇನೂ ಕೈಗೆತ್ತಿಕೊಳ್ಳದ ತಾಲಿಬಾನಿಗಳು ಸ್ಕ್ರೂ ಡ್ರೈವರ್ ಮತ್ತು ಸ್ಪ್ಯಾನರ್ಗಳನ್ನು ಹಿಡಿದು ಹೆಲಿಕಾಪ್ಟರ್ಗಳ ರಿಪೇರಿಗಿಳಿದಿದ್ದಾರೆ!

ಮನೆಯಲ್ಲಿ ಮಕ್ಳಳು ಓಡಿಸುವ ಸೈಕಲ್ ಮತ್ತು ಹೆಲಿಕಾಪ್ಟರ್ ಗಳ ನಡುವೆ ಏನೂ ವ್ಯತ್ಯಾವಿರದು ಅಂತ ತಾಲಿಬಾನಿಗಳು ಭಾವಿಸಿದಂತಿದೆ. ಆಟಿಕೆ ವಸ್ತುಗಳನ್ನು ರಿಪೇರಿ ಮಾಡಲು ಪರಿಣಿತಿ ಬೇಕಾಗುತ್ತದೆ, ಮನೆಯಲ್ಲಿ ಟ್ಯಾಪ್ ಹಾಳಾದರೆ ಅದನ್ನು ದುರಸ್ತಿ ಮಾಡಲು ಪ್ಲಂಬರ್ ಬೇಕು. ಫ್ಯಾನ್, ಫ್ರಿಜ್ ಅಷ್ಟ್ಯಾಕೆ, ಗ್ಯಾಸ್ ಸ್ಟವ್ ರಿಪೇರಿ ಮಾಡಲೂ ಪರಿಣಿತಿ ಬೇಕು ಮರಾಯ್ರೇ. ಅಂಥದರಲ್ಲಿ ಏನೂ ಗೊತ್ತಿರದ ಹೆಡ್ಡ ತಾಲಿಬಾನಿಗಳು ಹೆಲಿಕಾಪ್ಟರ್ ರಿಪೇರಿ ಮಾಡಲು ಮುಂದಾಗಿದ್ದಾರೆ!

ತಾಲಿಬಾನಿಗಳು ಸ್ಪ್ಯಾನರ್ಗಳನ್ನು ಹಿಡಿದು ಹೆಲಿಕಾಪ್ಟರ್ ಹತ್ತಿ ರಿಪೇರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಮೆರಿಕನ್ನರಿಗೆ ಎಲ್ಲಿಂದ ನಗಬೇಕೋ ಗೊತ್ತಾಗುತ್ತಿಲ್ಲ!

ಇದನ್ನೂ ಓದಿ:  ವಿಡಿಯೊ: ತಾಲಿಬಾನ್ ಧ್ವಜ ಕಿತ್ತೆಸೆದು ಜಲಾಲಾಬಾದ್ ನಿವಾಸಿಗಳ ಆಕ್ರೋಶ: ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಹಾರಾಟ