ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್

Updated on: Jan 01, 2026 | 8:23 AM

ಬಿಗ್ ಬಾಸ್ ಮನೆಯಲ್ಲಿರೋ ಧ್ರುವಂತ್ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಒಮ್ಮೊಮ್ಮೆ ಒಂದೊಂದು ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿದ್ದಾರೆ. ಈಗ ಅವರಿಗೆ ಉಸ್ತುವಾರಿ ನೀಡಲಾಗಿತ್ತು. ಈ ವೇಳೆ ಅವರು ಮಾಡಿದ ಎಡವಟ್ಟು ಚರ್ಚೆಗೆ ಕಾರಣ ಆಗಿದೆ. ಆ ಬಗ್ಗೆ ಇಲ್ಲಿ ಇದೆ ವಿವರ.

ಕ್ಯಾಪ್ಟನ್ಸಿ ಟಾಸ್ಕ್ ಈ ವಾರ ತುಂಬಾನೇ ಮುಖ್ಯ. ಈ ಬಾರಿ ಗೆದ್ದವರು ನೇರವಾಗಿ ಫಿನಾಲೆ ವಾರಕ್ಕೆ ಆಯ್ಕೆ ಆಗುತ್ತಾರೆ. ಇದಕ್ಕಾಗಿ ಭಾರೀ ಫೈಟ್ ನಡೆಯುತ್ತಿದೆ. ಈ ಟಾಸ್ಕ್​​ಗೆ ಧ್ರುವಂತ್ ಹಾಗೂ ಕಾವ್ಯಾ ಅವರನ್ನು ಉಸ್ತುವಾರಿ ಆಗಿ ನೇಮಕ ಮಾಡಲಾಗಿತ್ತು. ಇಬ್ಬರ ಮಧ್ಯೆ ಕಿರಿಕ್ ಆಗಿದೆ. ‘ಬಾಯಿ ಮುಚ್ಕೊಂಡು ಕೂತ್ಗೊ’ ಎಂದು ಕಾವ್ಯಾಗೆ ಧ್ರುವಂತ್ ಅವಾಜ್ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 01, 2026 08:18 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More