ಮೇಲುಕೋಟೆ ಚೆಲುವ ನಾರಾಯಣ ದರ್ಶನಕ್ಕೆ ಬಂದ ವಿಶೇಷ ಗಿಣಿ
ಪಾಂಡವಪುರ ತಾಲೂಕಿನ ಮೇಲುಕೋಟೆಗೆ ರಾಣಿ ಎಂಬ ಹೆಸರಿನ ಗಿಣಿಮರಿ ಭೇಟಿ ಕೊಟ್ಟು ದರ್ಶನ ಪಡೆದಿದೆ. ಇದು 15 ಪ್ರಮುಖ ದೇವಾಲಯಕ್ಕೆ ಭೇಟಿಕೊಟ್ಟಿದೆಯಂತೆ.
ಮಂಡ್ಯ: ಮೇಲುಕೋಟೆ ಚೆಲುವ ನಾರಾಯಣ ದರ್ಶನಕ್ಕೆ ವಿಶೇಷ ಅತಿಥಿಯೊಂದು ದೊಡ್ಡಬಳ್ಳಾಪುರದಿಂದ ಆಗಮಿಸಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ರಾಣಿ ಎಂಬ ಹೆಸರಿನ ಗಿಣಿಮರಿ ಭೇಟಿ ಕೊಟ್ಟು ದರ್ಶನ ಪಡೆದಿದೆ. ಇದು 15 ಪ್ರಮುಖ ದೇವಾಲಯಕ್ಕೆ ಭೇಟಿಕೊಟ್ಟಿದೆಯಂತೆ. ಕನ್ನಡ, ತಮಿಳು, ತೆಲಗು ಭಾಷೆ ಮಾತನಾಡುವ ವಿಶೇಷ ಗಿಣಿಮರಿ ಕಂಡ ಭಕ್ತರು ಸಂಸತಪಟ್ಟರು.
ಎರಡು ವರ್ಷದ ಹಿಂದೆ ಗಾಯಾವಾಗಿ ಕೆಳಗೆ ಬಿದ್ದಿದ್ದ ಗಿಣಿಮರಿಯನ್ನು ನಿಂಗಯ್ಯ ಎಂಬ ವ್ಯಕ್ತಿ ಸಾಕಿ ಸಲುಹುತ್ತಿದ್ದಾರೆ. ಆಗಿನಿಂದಲು ನಿಂಗಯ್ಯರ ತೋಟದ ಮನೆಯಲ್ಲಿ ರಾಣಿ ವಾಸ್ಥವ್ಯ ಹೂಡಿದೆ. ಆಗಾಗ ನಿಂಗಯ್ಯ ಹಾಗೂ ಅವರ ಮಕ್ಕಳನ್ನ ಕಾಲೆಳೆಯುವ ರಾಣಿಗೆ ದೇವರ ದರ್ಶನ ಮಾಡೋದು ಅಂದ್ರೆ ಪಂಚಪ್ರಾಣ. ಹೀಗಾಗಿ ಮೈಸೂರಿನ ತಾಯಿ ಚಾಮುಂಡಿ, ನಂಜುಡೇಶ್ವರ, ರಂಗನಾಥ ಸ್ವಾಮಿ, ನಿಮಿಷಾಂಬ, ಮೇಲುಕೋಟೆ ಚಲುವನಾರಾಯಣ ಸ್ವಾಮಿ ಸೇರಿದಂತೆ 15 ಪ್ರಮುಖ ದೇವರ ದರ್ಶನ ಪಡೆದಿದೆ.
Latest Videos