ಮಾಂಡೋಸ್ ಚಂಡಮಾರುತ ಅಬ್ಬರಕ್ಕೆ ತಮಿಳುನಾಡು ತತ್ತರ, ಚೆನೈಯಲ್ಲಿ ಬೃಹತ್ ಮರವುರುಳಿ ಪೆಟ್ರೋಲ್ ಬಂಕ್ ಛಿದ್ರ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 10, 2022 | 2:55 PM

ಭಾರಿ ಮಳೆಯಿಂದಾಗಿ ನಗರದ ರಸ್ತೆಗಳು ಜಲಾವೃತಗೊಂಡಿವೆ ಮತ್ತು ಎಗ್ಮೋರ್ ಪ್ರದೇಶದಲ್ಲಿ ಬೃಹತ್ ಮರವೊಂದು ಪೆಟ್ರೋಲ್ ಬಂಕ್ (petrol bunk) ಮೇಲೆ ಉರುಳಿ ಅದರ ಒಂದು ಭಾಗವನ್ನು ಛಿದ್ರಗೊಳಿಸಿದೆ.

ಚೆನೈ: ಮಾಂಡೋಸ್ ಚಂಡಮಾರುತದ (Mandous Cyclone) ಪ್ರಭಾವವನ್ನು ನಾವು ಅನುಭವಿಸುತ್ತಿದ್ದೇವೆ. ಶುಕ್ರವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ, ಮೋಡ ಮುಸುಕಿದ ವಾತಾವರಣ ಮತ್ತು ಥರಗುಟ್ಟುವ ಚಳಿ. ಅದರೆ, ನೆರೆರಾಜ್ಯ ತಮಿಳುನಾಡುನಲ್ಲಿ (Tamil Nadu) ಚಂಡಮಾರುತ ಪ್ರಭಾವ ಬಹಳ ತೀವ್ರವಾಗಿದೆ. ರಾಜ್ಯದಾದ್ಯಂತ ಮಳೆಯಾಗುತ್ತಿದೆ ಮತ್ತು ಚೆನೈ ನಗರದಲ್ಲಿನ ಈ ದೃಶ್ಯ ನೋಡಿ. ಭಾರಿ ಮಳೆಯಿಂದಾಗಿ ನಗರದ ರಸ್ತೆಗಳು ಜಲಾವೃತಗೊಂಡಿವೆ ಮತ್ತು ಎಗ್ಮೋರ್ ಪ್ರದೇಶದಲ್ಲಿ ಬೃಹತ್ ಮರವೊಂದು ಪೆಟ್ರೋಲ್ ಬಂಕ್ (petrol bunk) ಮೇಲೆ ಉರುಳಿ ಅದರ ಒಂದು ಭಾಗವನ್ನು ಛಿದ್ರಗೊಳಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ