20 ಹಸಿಮೆಣಸು ತಿನ್ನಲು ಪಣತೊಟ್ಟ ತನಿಷಾ, ವರ್ತೂರು ಸಂತೋಷ್; ಹೊಟ್ಟೆಯಲ್ಲಿ ಬೆಂಕಿ

Updated on: Nov 21, 2023 | 4:06 PM

ವರ್ತೂರು ಸಂತೋಷ್ ಹಾಗೂ ತನಿಷಾಗೆ ತಲಾ 20 ಹಸಿಮೆಣಸು ತಿನ್ನಬೇಕು ಎನ್ನುವ ಚಾಲೆಂಜ್ ನೀಡಲಾಗಿದೆ. ಈ ಚಾಲೆಂಜ್​ನ ಇವರು ಸ್ವೀಕರಿಸಿದ್ದಾರೆ.

ಬಿಗ್ ಬಾಸ್ (Bigg Boss)​ ಕಂಟೆಸ್ಟಂಟ್​ಗಳಿಗೆ ಸ್ಪರ್ಧೆ ಕಠಿಣ ಆಗುತ್ತಲೇ ಇದೆ. ಹೊಸ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಈ ವಾರ ಎರಡು ತಂಡ ಮಾಡಲಾಗಿದೆ. ಎದುರಾಳಿ ತಂಡಕ್ಕೆ ಕಠಿಣ ಟಾಸ್ಕ್ ನೀಡಬೇಕು. ಅಂತೆಯೇ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರ ತಲೆ ಕೂದಲನ್ನು ಬೋಳಿಸಲಾಗಿದೆ. ಈಗ ವರ್ತೂರು ಸಂತೋಷ್ ಹಾಗೂ ತನಿಷಾಗೆ ತಲಾ 20 ಹಸಿಮೆಣಸು ತಿನ್ನಬೇಕು ಎನ್ನುವ ಚಾಲೆಂಜ್ ನೀಡಲಾಗಿದೆ. ಈ ಚಾಲೆಂಜ್​ನ ಇವರು ಸ್ವೀಕರಿಸಿದ್ದಾರೆ. ಹಸಿಮೆಣಸು ತಿನ್ನುವಾಗ ಕಣ್ಣಲ್ಲಿ ನೀರು ಬಂದಿದೆ. ‘ಇವರ ಹೊಟ್ಟೆಯಲ್ಲಿ ಬೆಂಕಿ ಬಿದ್ದಿರಬಹುದು’ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.  ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ 24 ಗಂಟೆ ಲೈವ್ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Nov 21, 2023 04:01 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More