‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ

Updated on: Apr 10, 2025 | 10:50 PM

ಡಾಲಿ ಧನಂಜಯ ಅವರು ‘ವಿದ್ಯಾಪತಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ಸ್ನೇಹಿತ ನಾಗಭೂಷಣ್ ಹೀರೋ ಆಗಿ ನಟಿಸಿದ್ದಾರೆ. ಸಿನಿಮಾ ನೋಡಿದ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ಬಗ್ಗೆ ಹಿರಿಯ ನಟಿ ತಾರಾ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ನಟಿ ತಾರಾ ಅನುರಾಧಾ ಅವರು ‘ವಿದ್ಯಾಪತಿ’ (Vidyapati) ಸಿನಿಮಾ ನೋಡಿದ್ದಾರೆ. ಪ್ರೀಮಿಯರ್ ಶೋ ಬಳಿಕ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ನಾಗಭೂಷಣ (Nagabhushana), ಮಲೈಕಾ ವಸುಪಾಲ್ ಮುಂತಾದವರು ನಟಿಸಿದ್ದಾರೆ. ನಾಗಭೂಷಣ ಪ್ರತಿಭೆಯನ್ನು ತಾರಾ ಹೊಗಳಿದ್ದಾರೆ. ‘ನಾಗು ಜೊತೆ ಬಡವ ರಾಸ್ಕಲ್ ಸಿನಿಮಾದಲ್ಲಿ ನಾನು ಒಂದು ದೃಶ್ಯದಲ್ಲಿ ನಟಿಸಿದ್ದಾಗಲೇ ಇವನು ಸಖತ್ ಕಲಾವಿದ ಅಂತ ಧನಂಜಯ್​ಗೆ ಹೇಳಿದ್ದೆ. ಅದನ್ನು ಅವನು ಟಗರು ಪಲ್ಯ ಸಿನಿಮಾದಲ್ಲಿ ಸಾಬೀತು ಮಾಡಿದ. ಈಗ ಈ ಸಿನಿಮಾದಲ್ಲಿ ಗಟ್ಟಿಯಾದ. ಡಾಲಿಗೆ ಈ ಸಿನಿಮಾದಿಂದ ಯಶಸ್ಸು ಸಿಗಲಿ. ನಾಗುಗೆ ಹೆಸರು ತಂದುಕೊಡಲಿ’ ಎಂದು ತಾರಾ (Tara Anuradha) ಅವರು ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More