‘ನೀನು ಸ್ಯಾಂಡಲ್​​ವುಡ್​ನ ಹಿರಿಯ ಮಗ, ಕಾರ್ಯಕ್ರಮಕ್ಕೆ ಬಂದಿದ್ದು ಖುಷಿ ಆಯ್ತು’; ಶಿವಣ್ಣನಿಗೆ ತಾರಾ ಧನ್ಯವಾದ

| Updated By: ರಾಜೇಶ್ ದುಗ್ಗುಮನೆ

Updated on: Dec 19, 2021 | 10:49 PM

‘ಬಡವ ರಾಸ್ಕಲ್​’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್ ಇಂದು (ಡಿಸೆಂಬರ್​ 19) ​ ನಡೆದಿದೆ. ಇದಕ್ಕೆ ಶಿವಣ್ಣ ಕೂಡ ಆಗಮಿಸಿದ್ದರು. ಈ ವೇಳೆ ಪುನೀತ್​ ಅವರನ್ನು ನೆನೆಯುವ ಕಾರ್ಯ ನಡೆಯಿತು.

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡ ನಂತರದಲ್ಲಿ ಚಿತ್ರರಂಗ ಸಾಕಷ್ಟು ಬಡವಾಗಿದೆ. ಅವರಿಲ್ಲದೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅವರನ್ನು ನೆನಪಿಸಿಕೊಳ್ಳುವ ಕೆಲಸ ಎಲ್ಲ ಕಡೆಗಳಲ್ಲೂ ನಡೆಯುತ್ತಿದೆ. ಪುನೀತ್​ ರಾಜ್​ಕುಮಾರ್​ ಇಲ್ಲದೆ ಶಿವರಾಜ್​ಕುಮಾರ್​ ತುಂಬಾನೇ ಬೇಸರಗೊಂಡಿದ್ದಾರೆ. ಈಗ ನಿಧಾನವಾಗಿ ಅವರು ಮತ್ತೆ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಸಿನಿಮಾ ಡಿಸೆಂಬರ್​ 24ರಂದು ರಿಲೀಸ್​ ಆಗುತ್ತಿದೆ. ಈಗಾಗಲೇ ರಿಲೀಸ್​ ಆಗಿರುವ ಟ್ರೇಲರ್​ಗೆ ಸಿನಿ ಪ್ರೇಮಿಗಳಿಂದ ಮೆಚ್ಚುಗೆ ಬಂದಿದೆ. ಇಂದು (ಡಿಸೆಂಬರ್​ 19) ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ನಡೆದಿದೆ. ಇದಕ್ಕೆ ಶಿವಣ್ಣ ಕೂಡ ಆಗಮಿಸಿದ್ದರು. ಈ ವೇಳೆ ಪುನೀತ್​ ಅವರನ್ನು ನೆನೆಯುವ ಕಾರ್ಯ ನಡೆಯಿತು. ಅಲ್ಲದೆ, ಶಿವರಾಜ್​ಕುಮಾರ್ ಚಿತ್ರರಂಗದ ಕಾರ್ಯಕ್ರಮಕ್ಕೆ ಮರಳಿರುವುದಕ್ಕೆ ಧನ್ಯವಾದ ತಿಳಿಸಿದರು ತಾರಾ.

ಇದನ್ನೂ ಓದಿ: ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಪ್ರೀ-ರಿಲೀಸ್​ ಕಾರ್ಯಕ್ರಮ​ ಲೈವ್​ ನೋಡಿ