ಎಲ್ಲಿ ಪ್ರೀತಿ ಪ್ರಾರಂಭವಾಯಿತೋ ಅಲ್ಲಿಯೇ ಪ್ರೀ-ವೆಡ್ಡಿಂಗ್ ವಿಡಿಯೋ ಮಾಡಿಸಿದ ತರುಣ್-ಸೋನಲ್

|

Updated on: Jul 22, 2024 | 11:35 AM

ತರುಣ್ ಸುಧೀರ್ ಹಾಗೂ ಸೋನಲ್ ಅವರು ಮದುವೆ ಆಗುತ್ತಾರೆ ಎಂದು ಸುದ್ದಿ ಹರಿದಾಡಿತ್ತು. ಈಗ ಈ ವಿಚಾರ ಅಧಿಕೃತವಾಗಿದೆ. ಇವರ ಪ್ರೀತಿ ಶುರುವಾಗಿದ್ದು ಸಿನಿಮಾ ರಂಗದಲ್ಲಿ. ಹೀಗಾಗಿ ಥಿಯೇಟರ್​ನಲ್ಲೇ ಪ್ರೀ-ವೆಡ್ಡಿಂಗ್ ವಿಡಿಯೋ ಮಾಡಿಸಿದ್ದಾರೆ.

ತರುಣ್ ಸುಧೀರ್ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ. ನಟಿ ಸೋನಲ್ ಮೊಂತೆರೋ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ಸ್ಯಾಂಡಲ್​ವುಡ್​ನ ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಈಗ ಇಬ್ಬರೂ ವಿವಾಹ ಆಗುತ್ತಿದ್ದಾರೆ. ಇವರಿಬ್ಬರ ಪ್ರೀತಿ ಆರಂಭ ಆಗಿದ್ದು ಸಿನಿಮಾ ಸೆಟ್​ನಲ್ಲಿ. ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಸಿನಿಮಾ ಮಾಡುವಾಗಲೇ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಈಗ ತರುಣ್ ಹಾಗೂ ಸೋನಲ್ ಥಿಯೇಟರ್​ನಲ್ಲೇ ಪ್ರೀ-ವೆಡ್ಡಿಂಗ್ ವಿಡಿಯೋ ಮಾಡಿಸಿದ್ದಾರೆ. ಅದೂ ಥಿಯೇಟರ್​ನಲ್ಲಿ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದು ಎಲ್ಲ ಗಮನ ಸೆಳೆಯುತ್ತಿದೆ. ಆಗಸ್ಟ್ 10-11ರಂದು ಇವರ ವಿವಾಹ ನೆರವೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.