ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್; ಶಾಕಿಂಗ್ ವಿಡಿಯೋ ವೈರಲ್
ಟಾಟಾ ಹ್ಯಾರಿಯರ್ ಇವಿ ಕಾರು ಸಮ್ಮನ್ ಮೋಡ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆ ಚಲಿಸಿದ್ದು, ಒಬ್ಬ ವ್ಯಕ್ತಿ ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿಡಿಯೋ ಆತಂಕ ಮೂಡಿಸಿದೆ. ಈ ಘಟನೆಗೆ ಟಾಟಾ ಕಂಪನಿ ಪ್ರತಿಕ್ರಿಯಿಸಿದೆ. ಆಗಸ್ಟ್ 14 ರಂದು ದಿನಾಂಕದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎಸ್‌ಯುವಿ ತನ್ನ ಚಾಲಕನ ಬದಿಯ ಬಾಗಿಲು ತೆರೆದಿರುವಾಗ ಇಳಿಜಾರಿನಲ್ಲಿ ಉರುಳಿ, ಒಳಗೆ ಕಾಲಿಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಕೆಡವಿರುವುದನ್ನು ತೋರಿಸುತ್ತದೆ.
ನವದೆಹಲಿ, ಆಗಸ್ಟ್ 22: ತಮಿಳುನಾಡಿನ (Tamil Nadu) ಅವಿನಾಶಿಯಲ್ಲಿ ನಡೆದ ಟಾಟಾ ಹ್ಯಾರಿಯರ್ ಇವಿ (Tata Harrier EV) ಕಾರು ಅಪಘಾತ (accident) ಆತಂಕ ಮೂಡಿಸಿದೆ. ಎಸ್‌ಯುವಿಯನ್ನು ಇಳಿಜಾರಿನಲ್ಲಿ ನಿಲ್ಲಿಸಿದ್ದಾಗ ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಲಾರಂಭಿಸಿದೆ. ಆಗ ವ್ಯಕ್ತಿಯೊಬ್ಬರು ಕಾರಿನ ಬಾಗಿಲನ್ನು ತೆರೆದು ಬ್ರೇಕ್ ಹಾಕಲು ಪ್ರಯತ್ನಿಸಿದ್ದಾರೆ. ಆಗ ಅವರ ಮೇಲೆ ಕಾರು ಹರಿದಿದೆ. ಈ ವೇಳೆ ಅವರ ತಲೆಗೆ ಗಂಭೀರವಾಗಿ ಗಾಯವಾಗಿ ಬ್ರೈನ್ ಡೆಡ್ ಆಗಿದೆ. ನಂತರ ಆ ಕಾರು ಹಿಂದಿದ್ದ ಗೂಡಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಟಾಟಾ ಮೋಟಾರ್ಸ್ ಸಂತಾಪ ವ್ಯಕ್ತಪಡಿಸಿದೆ. ಮೃತರ ಕುಟುಂಬಕ್ಕೆ ನಮ್ಮ ಸಂತಾಪಗಳು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು, ಅದಕ್ಕೆ ಕಾರಣವನ್ನು ಸಂಗ್ರಹಿಸುತ್ತಿದ್ದೇವೆ ಎಂದು ಟಾಟಾ ಗ್ರೂಪ್ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ