AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಂದಲೇ ಅತಿ ಹೆಚ್ಚು ಅಪಘಾತ: ವಾರದಲ್ಲಿ ನಾಲ್ವರ ಸಾವು

ಬೆಂಗಳೂರಿನಲ್ಲಿ ಒಂದಿಲ್ಲೊಂದು ನಿರ್ಲಕ್ಷ್ಯದಿಂದಾಗಿ ಬಿಎಂಟಿಸಿ ಬಸ್​ಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ನಾಲ್ಕು ಜನರು ಮೃತಪಟ್ಟರೆ, ಎಲೆಕ್ಟ್ರಿಕ್ ಬಸ್​​ಗಳಿಂದ 15 ತಿಂಗಳಲ್ಲಿ 18 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದಕ್ಕೆ ಚಾಲಕರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕಾರಣವೆಂಬ ಆರೋಪಗಳು ಕೇಳಿಬಂದಿವೆ.

ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಂದಲೇ ಅತಿ ಹೆಚ್ಚು ಅಪಘಾತ: ವಾರದಲ್ಲಿ ನಾಲ್ವರ ಸಾವು
ಬಿಎಂಟಿಸಿ ಬಸ್​​
ಗಂಗಾಧರ​ ಬ. ಸಾಬೋಜಿ
|

Updated on: Aug 22, 2025 | 11:16 AM

Share

ಬೆಂಗಳೂರು, ಆಗಸ್ಟ್​ 22: ಸಿಲಿಕಾನ್ ಸಿಟಿಯ ಜನರು ಸಂಚಾರಕ್ಕಾಗಿ ಹೆಚ್ಚಾಗಿ ಬಿಎಂಟಿಸಿ ಬಸ್​ಗಳನ್ನು (BMTC Bus) ಅವಲಂಬಿಸಿದ್ದಾರೆ. ಆದರೆ ಇದೇ ಬಸ್​​ಗಳಿಗೆ ಬಲಿಯಾಗುವವರ (death) ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ. ಒಂದಲ್ಲ‌ ಒಂದು ನಿರ್ಲಕ್ಷ್ಯದಿಂದಾಗಿ ಅಮಾಯಕರ ಸಾವಿಗೆ ಕಾರಣವಾಗುತ್ತಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ಜನರು ಬಿಎಂಟಿಸ್​ ಬಸ್​​ನಿಂದ ಮೃತಪಟ್ಟಿದ್ದಾರೆ. ಎಲೆಕ್ಟ್ರಿಕ್ ಬಸ್​ಗಳಿಂದಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸಿದ್ದು, 15 ತಿಂಗಳಲ್ಲಿ 18 ಜನರು ಬಲಿಯಾಗಿದ್ದಾರೆ.

ಬಿಎಂಟಿಸಿ ಬಸ್​ಗಳಿಗೆ ಸಾರ್ವಜನಿಕರು ಸೇರಿದಂತೆ ಬೈಕ್ ಸವಾರರು ಬಲಿಯಾಗುತ್ತಿದ್ದಾರೆ. ಮೊನ್ನೆ ಜಯನಗರದಲ್ಲಿ ಎಲೆಕ್ಟ್ರಿಕ್​​ ಬಸ್​ನಿಂದ ಬಿದ್ದು ವೃದ್ಧ ಸಾವನ್ನಪ್ಪಿದ್ದರು. ಜುಲೈ 30ರಂದು ಮಡಿವಾಳದಲ್ಲಿ ಎಲೆಕ್ಟ್ರಿಕ್ ಬಸ್​ಗೆ ಸಿಲುಕಿ ವೃದ್ದೆ ಸಾವನ್ನಪ್ಪಿದ್ದರು. ಹೀಗೆ 15 ತಿಂಗಳಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಖಾಸಗಿ ಬಸ್​​ಗಳಲ್ಲಿ ಕನ್ನಡ ಮಾಯ! ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ, ಕ್ರಮಕ್ಕೆ ಆಗ್ರಹ

ಇನ್ನು ಎಲೆಕ್ಟ್ರಿಕ್ ಬಸ್​ಗಳ ಡ್ರೈವರ್​ಗಳು ಖಾಸಗಿ ಚಾಲಕರಾಗಿದ್ದಾರೆ. ಈ ಚಾಲಕರ ಮೇಲೆ ಅತಿವೇಗ, ನಿರ್ಲಕ್ಷ್ಯದಿಂದ ಬಸ್ ಚಲಾವಣೆ ಆರೋಪಗಳಿವೆ. ಬಿಎಂಟಿಸಿ ಬಸ್ ಚಾಲಕರಿಗೆ ಚಾಲನೆ ವೇಳೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸಂಚಾರಿ ಪೊಲೀಸರಿಂದ ನಿರಂತರ ತರಬೇತಿ ನೀಡಲಾಗಿದೆ. ಆದರೂ ಪ್ರಾಣಹಾನಿ ಸಂಭವಿಸುತ್ತಿವೆ.

ಶಾಲೆಗೆ ಹೋಗುತ್ತಿದ್ದ ಬಾಲಕಿ ಬಿಎಂಟಿಸಿ ಬಸ್​ಗೆ ಬಲಿ

ಶಾಲೆಗೆ ಹೋಗುವಾಗ ನಡೆದ ಅಪಘಾತದಲ್ಲಿ 10 ವರ್ಷದ ಬಾಲಕಿಯ ಸಾವಾಗಿದೆ. ಬಿಎಂಟಿಸಿ ಬಸ್​ಗೆ ಸಿಲುಕಿ ಸ್ಥಳದಲ್ಲಿ ಬಾಲಕಿ ಜೀವ ಬಿಟ್ಟಿದ್ದಾಳೆ. ಕೋಗಿಲು ಕ್ರಾಸ್​ನಿಂದ ಮಾರುತಿನಗರಕ್ಕೆ ಹೋಗುವ ರಸ್ತೆಯಲ್ಲಿ ನಿನ್ನೆ ಅಪಘಾತ ಸಂಭವಿಸಿತ್ತು. ಈ ದುರಂತದ ದೃಶ್ಯ ಡ್ಯಾಶ್ ಕ್ಯಾಮೆರಾ, ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಅಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ವಯಸ್ಕ ಮಹಿಳೆ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

ಬೆಳಗ್ಗೆ ಸುಮಾರು 8 ಗಂಟೆ ಮಾರುತಿ ನಗರ ನಿವಾಸಿ ಹರ್ಷಿತಾ ತನ್ನ ಇಬ್ಬರು ಮಕ್ಕಳನ್ನ ಶಾಲೆಗೆ ಬಿಡಲು ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆದರೆ ಮಾರುತಿನಗರದ ಮುಖ್ಯರಸ್ತೆಯಲ್ಲಿ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಮತ್ತು ಬೈಕ್​ಗೆ ಟಚ್ ಆಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಹರ್ಷಿತಾ ಬೈಕ್ ಸಮೇತ ಕೆಳಗೆ ಬಿದ್ದಿದ್ದಾರೆ. ಇದರಿಂದ ಬಸ್​ನ ಹಿಂಬದಿ ಕೆಳಗೆ ಬಿದ್ದ 10 ವರ್ಷದ ತನ್ವಿ ಕೃಷ್ಣ ಮೇಲೆ ಹರಿದು ಆಕೆ ಸ್ಥಳದಲ್ಲೇ ಅಸುನೀಗೀದ್ದಾಳೆ. ಹಾಗೆ ಬೈಕ್​ನಲ್ಲಿದ್ದ ತನ್ವಿ ತಾಯಿ, ಸಹೋದರಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.

ವರದಿ: ಪ್ರದೀಪ್​ ಚಿಕ್ಕಾಟೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.