ನರ್ಸಿಂಗ್ ಪರೀಕ್ಷೆ: ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ, ರಾಜಾರೋಷವಾಗಿ ಉತ್ತರ ಹೇಳಿ ಕೊಟ್ಟ ಶಿಕ್ಷಕರು
ದಾವಣಗೆರೆಯ ಸಂಜೀವಿನಿ ನರ್ಸಿಂಗ್ ಕಾಲೇಜ್ನಲ್ಲಿ ಪರೀಕ್ಷೆ ಬರೆಯುತ್ತಿರವ ನರ್ಸಿಂಗ್ ವಿದ್ಯಾರ್ಥಿಗಳಿಗೆ, ಶಿಕ್ಷಕರೇ ಮೊಬೈಲ್ ನೋಡಿ ಉತ್ತರ ಹೇಳಿದ್ದಾರೆ.
ದಾವಣಗೆರೆ (Davangere) ಆಂಜನೇಯ ಬಡಾವಣೆಯಲ್ಲಿರುವ ಸಂಜೀವಿನಿ ನರ್ಸಿಂಗ್ (Nursing) ಕಾಲೇಜ್ನಲ್ಲಿ ಇಂದು (ಡಿ.12) ನರ್ಸಿಂಗ್ನ ‘ಅನಟಾಮಿಕ್’ ವಿಷಯದ ಪರೀಕ್ಷೆ ನಡೆದಿದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಮಾಡಲು ಕಾಲೇಜು ಸಿಬ್ಬಂದಿಯೇ ಸಾಥ್ ನೀಡಿದ್ದಾರೆ. ಆಶ್ಚರ್ಯಕರ ವಿಚಯವೆಂದರೇ ಪರೀಕ್ಷೆ ಬರೆಯಲು ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ದುಡ್ಡು ನೀಡಿದ ವಿದ್ಯಾರ್ಥಿಗಳಿಗೆ ಕಾಲೇಜ್ ಸಿಬ್ಬಂದಿ ಮೊಬೈಲ್ ಹಿಡಿದು ವಿದ್ಯಾರ್ಥಿಗಳಿಗೆ ಉತ್ತರ ಹೇಳಿರುವ ವಿಡಿಯೋ ವೈರಲ್ ಆಗಿದೆ.
Published on: Dec 12, 2022 06:10 PM