ಮೈಸೂರು ಶಾತಗಳ್ಳಿ ಡಿಪೋ ಬಳಿ ಅಧಿಕಾರಿ ವಿರುದ್ಧ ಕಾಂಗ್ರೆಸ್ ಮುಖಂಡ ಶಫಿ ಮತ್ತವರ ಪತ್ನಿಯ ಮಚ್ಚು ಹಿಡಿದು ಬೈದಾಟ!

ಮೈಸೂರು ಶಾತಗಳ್ಳಿ ಡಿಪೋ ಬಳಿ ಅಧಿಕಾರಿ ವಿರುದ್ಧ ಕಾಂಗ್ರೆಸ್ ಮುಖಂಡ ಶಫಿ ಮತ್ತವರ ಪತ್ನಿಯ ಮಚ್ಚು ಹಿಡಿದು ಬೈದಾಟ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 12, 2022 | 4:01 PM

ಪೊಲೀಸರು ಅವರಿಬ್ಬರನ್ನು ಸಮಾಧಾನ ಪಡಿಸಿದರೂ ಜೋರಾದ ಧ್ವನಿಯಲ್ಲಿ ಅವಾಚ್ಯ ಪದಗಳನ್ನು ಬಳಿಸಿ ಅಧಿಕಾರಿಯನ್ನುತೆಗಳಿದ್ದಾರೆ.

ಮೈಸೂರು: ನಗರದ ಸಾತಗಳ್ಳಿ ಬಸ್ ಡಿಪೋ (bus depot) ಬಳಿ ಇಂದು ನಾಟಕೀಯ ಸನ್ನಿವೇಶ ಸೃಷ್ಟಿಯಾಗಿತ್ತು. ವಿಷಯವೇನೆಂದರೆ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳುವ ಮೊಹ್ಮದ್ ಶಫಿ (Mohammad Shafi) ಎನ್ನುವ ವ್ಯಕ್ತಿಯೊಬ್ಬರು ಕೆ ಎಸ್ ಆರ್ ಟಿಸಿ ಗೆ ಸೇರಿದ ಡಿಪೋ ಪಕ್ಕದ ಜಾಗವನ್ನು ಬಾಡಿಗೆ ಪಡೆದು ಕಾಲೇಜು ನಡೆಸುತ್ತ್ತಿದ್ದಾರೆ. ಶಫಿ ಬಾಡಿಗೆ ಕಟ್ಟದ ಕಾರಣ ಡಿಪೋ ಅಧಿಕಾರಿಯೊಬ್ಬರು (depot official) ನೋಟಿಸ್ ನೀಡಿದ್ದಾರೆ. ಇದರಿಂದ ಅಧಿಕಾರಿ ಮೇಲೆ ರೊಚ್ಚಿಗೆದ್ದ ಶಫಿಯ ಪತ್ನಿ ಕೈಯಲ್ಲಿ ಮಚ್ಚು ಹಿಡಿದು ಕೊಚ್ಚಿ ಹಾಕ್ತೀನಿ ಅಂತ ಡಿಪೋ ಬಳಿ ಗಂಡನ ಜೊತೆ ಬಂದಿದ್ದಾಳೆ. ಪೊಲೀಸರು ಅವರಿಬ್ಬರನ್ನು ಸಮಾಧಾನ ಪಡಿಸಿದರೂ ಜೋರಾದ ಧ್ವನಿಯಲ್ಲಿ ಅವಾಚ್ಯ ಪದಗಳನ್ನು ಬಳಿಸಿ ತೆಗಳಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಫಿ ತನ್ನ ಧರ್ಮಪತ್ನಿಯೊಂದಿಗೆ ನಾಪತ್ತೆಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ