ಬೀದರ್: ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು ಔರಾದ್ ತಾಲೂಕಿನ ಕರಿಕ್ಯಾಳ ಗ್ರಾಮದ ಸರಕಾರಿ ಶಾಲೆಗೆ ಭೆಟ್ಟಿ ನೀಡಿದ್ದಾರೆ. ಈ ವೇಳೆ ಶಾಲೆ ಪರಿಶೀಲನೆ ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕರ್ನಾಟಕದ ಸಿಎಂ ಯಾರು ಎಂದು ಕೇಳಿದಾಗ ಸಿದ್ದರಾಮಯ್ಯ (Siddaramaiah) ಅವರು ಎಂದು ಉತ್ತರಿಸಿದ ಮಕ್ಕಳಿಗೆ ರಾಷ್ಟ್ರಪತಿ ಯಾರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಕ್ಕಳು ನರೇಂದ್ರ ಮೋದಿ (Narendra Modi) ಅಂತ ಹೇಳಿದಾಗ ಪ್ರಶ್ನೆ ಕೇಳಿದ ಈಶ್ವರ್ ಖಂಡ್ರೆ ಅಚ್ಚರಿಗೊಂಡಿದ್ದಾರೆ. ಇದೇ ವೇಳೆ ಶಿಕ್ಷಕರಲ್ಲಿ ಸಾಮಾನ್ಯ ಜ್ಞಾನ ಎಷ್ಟಿದೆ ಎಂದು ತಿಳಿಯಲು ಮುಂದಾದ ಖಂಡ್ರೆ, ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಿಕ್ಷಕರು ತಪ್ಪು ಉತ್ತರಿಸಿದ್ದನು ನೋಡಿ ಸಚಿವರು ಮುಜುಗರಕ್ಕೀಡಾದರು. ಅಲ್ಲದೆ, ಶಿಕ್ಷಕರಿಗೆ ಗೊತ್ತಿಲ್ಲ ಅಂದರೆ ಹೇಗಪ್ಪ ಮಕ್ಕಳಿಗೆ ಏನ ಕಲಿಸಿಕೊಡುತ್ತೀರಿ ಎಂದು ಕೇಳಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ