ಕಿರುಚಾಡಬೇಡಿ ಅನ್ನುತ್ತಾ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್!
ಆಡುವ ದಿನಗಳಲ್ಲಿ ಟೀಮಿನ ‘ಮಿಸ್ಟರ್ ಡಿಪೆಂಡೇಬಲ್’ ಅನಿಸಿಕೊಂಡಿದ್ದ ದ್ರಾವಿಡ್ ಇಲ್ಲೂ ತನ್ನ ಡಿಪೆಂಡೇಬಿಲಿಟಿ ಪ್ರದರ್ಶಿಸಿ ಅಭಿಮಾನಿಗಳನ್ನು ಸಂತಸಪಡಿಸುತ್ತಾರೆ. ಅವರು ಹತ್ತಿರ ಬಂದಾಗ ಫ್ಯಾನ್ಸ್ ಖುಷಿ ಮತ್ತು ರೋಮಾಂಚನದಿಂದ ಚೀರಾಟವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ‘ಡೋಂಟ್ ಶೌಟ್ ಡೋಂಟ್ ಶೌಟ್!’ ಅನ್ನುತ್ತಾ ಎಲ್ಲರಿಗೂ ಆಟೋಗ್ರಾಫ್ ನೀಡುತ್ತಾರೆ.
ಬೆಂಗಳೂರು: ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಈಗಲೂ ತಾವು ಭಾರತೀಯ ತಂಡಕ್ಕೆ ಆಡುತ್ತಿದ್ದ ದಿನಗಳಲ್ಲಷ್ಟೇ ಜನಪ್ರಿಯರು. ಐಸಿಸಿ ವಿಶ್ವಕಪ್ 2023 (ICC CWC 2023) ಟೂರ್ನಿಯ ತನ್ನ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಈಗಾಗಲೇ ಫೈನಲ್ ತಲುಪಿರುವ ಭಾರತ ನಾಳೆ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಭಾರತದ ಆಟಗಾರರು ಇವತ್ತೆಲ್ಲ ಅಭ್ಯಾಸನಿರತರಾಗಿದ್ದರು. ಮೈದಾನದ ಹೊರಗಡೆ ರಾಹುಲ್ ದ್ರಾವಿಡ್ ಕಾಣಿಸಿದಾಗ ಆಟಗಾರರ ಒಂದು ಝಲಕ್ ಪಡೆಯಲು ಬಕಪಕ್ಷಿಗಳಂತೆ ನಿಂತಿದ್ದ ನಗರದ ಕ್ರಿಕೆಟ್ ಪ್ರೇಮಿಗಳು ‘ರಾಹುಲ್ ಸಾರ್ ರಾಹುಲ್ ಸರ್!’ ಅಂತ ಒಕ್ಕೊರಲಿನಿಂದ ಕೂಗುತ್ತಾರೆ. ಆಡುವ ದಿನಗಳಲ್ಲಿ ಟೀಮಿನ ‘ಮಿಸ್ಟರ್ ಡಿಪೆಂಡೇಬಲ್’ ಅನಿಸಿಕೊಂಡಿದ್ದ ದ್ರಾವಿಡ್ ಇಲ್ಲೂ ತನ್ನ ಡಿಪೆಂಡೇಬಿಲಿಟಿ ಪ್ರದರ್ಶಿಸಿ ಅಭಿಮಾನಿಗಳನ್ನು ಸಂತಸಪಡಿಸುತ್ತಾರೆ. ಅವರು ಹತ್ತಿರ ಬಂದಾಗ ಫ್ಯಾನ್ಸ್ ಖುಷಿ ಮತ್ತು ರೋಮಾಂಚನದಿಂದ ಚೀರಾಟವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ‘ಡೋಂಟ್ ಶೌಟ್ ಡೋಂಟ್ ಶೌಟ್!’ ಅನ್ನುತ್ತಾ ಎಲ್ಲರಿಗೂ ಆಟೋಗ್ರಾಫ್ ನೀಡುವ ಜಂಟಲ್ ಮ್ಯಾನ್ ದ್ರಾವಿಡ್, ಒಬ್ಬ ಅಭಿಮಾನಿಗಾಗಿ ಸೆಲ್ಫೀಯನ್ನು ತಾವೇ ಕ್ಲಿಕ್ಕಿಸುತ್ತಾರೆ. ಕ್ರಿಕೆಟ್ ಪ್ರೇಮಿಗಳು ಫುಲ್ ಖುಶ್!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ